ಹಿರಿಯೂರಿನಲ್ಲಿ ಮತ್ತೊಂದು ಐತಿಹಾಸಿಕ ಗೆಲುವು ಸಾಧಿಸಿದ ಕಾಂಗ್ರೆಸ್: ನೆಲಕಚ್ಚಿದ ಬಿಜೆಪಿ.! ವಿಧಾನಸಭಾ ಚುನಾವಣೆವಣೆಯಲ್ಲಿ ಬಿಜೆಪಿಗೆ ಸೋಲಿನ ಭೀತಿ
ಆಧಿಕಾರ ಯಾರಿಗೂ ಶಾಶ್ವತವಲ್ಲ ಎಂಬುದು ಎಷ್ಟು ಸತ್ಯವೋ, ಸೋಲು ಕೂಡ ಯಾವಾಗ ಬೇಕಾದರೂ ಎದುರಾಗಬುದು ಎಂಬುದು ಅಷ್ಟೇ ಸತ್ಯ. ಸದ್ಯ ಬಿಜೆಪಿಯ ಪರಿಸ್ಥಿತಿಯೂ ಹಿರಿಯೂರಿನಲ್ಲಿ ಇದೇ ರೀತಿ ಆಗಿದೆ. ವಿವಿಧ ಕಾರಣಗಳಿಂದ ತೆರವಾಗಿದ್ದ ಹಿರಿಯೂರು ನಗರಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಇದರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭರ್ಜರಿ ಗೆಲುವಾಗಿದೆ. ಈ ಮೂಲಕ ಆರೋಗ್ಯ ಸಚಿವ ಸುಧಾಕರ್ ಅವರಿಗೆ ಭಾರೀ ಮುಖಭಂಗವಾಗಿದೆ.
ಕಾಂಗ್ರೆಸ್ ಹಿರಿಯೂರಿನಲ್ಲಿ ಗೆಲುವು ಸಾಧಿಸಲು ಪ್ರಮುಖ ಕಾರಣ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಶ್ರಮ. ಬುಧವಾರ ಪ್ರಕಟಗೊಂಡ ಹಿರಿಯೂರು ನಗರಸಭೆಯ ಚುನಾವಣೆಯಲ್ಲಿ ಫಲಿತಾಂಶದಲ್ಲಿ ಕಾಂಗ್ರೆಸ್ ನಾಲ್ಕು ಸ್ಥಾನಗಳನ್ನು ಗೆಲುವು ಸಾಧಿಸುವ ಮೂಲಕ ಕ್ಲಿನ್ ಸ್ವಿಪ್ ಮಾಡಿಕೊಂಡಿದೆ. ಹಿರಿಯೂರಿನಲ್ಲಿ ನಡೆದ ಈ ಚುನಾವಣೆಯ ಫಲಿತಾಂಶ ಬಿಜೆಪಿಗೆ ಶಾಕ್ ಕೊಟ್ಟಂತಾಗಿದೆ.
ಬಿಜೆಪಿಯ ಈ ಲೆಕ್ಕಾಚಾರದ ಪ್ರಕಾರ ಮುಂದಿನ ವಿಧಾನಸಭಾಯ ಫಲಿತಾಂಶದಲ್ಲಿ ಸೋಲಾಗಬಹುದು ಎಂಬ ಭೀತಿ ಬಿಜೆಪಿಗೆ ಈಗಾಲೇ ಶುರುವಾಗಿದೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿರುವ ಮಾತು. ಒಟ್ಟಾರೆಯಾಗಿ ದೇಶದ ಕೆಲವು ಭಾಗಗಳಲ್ಲಿ ಬಿಜೆಪಿ ತನ್ನ ವರ್ಚಸ್ಸು ಕಳೆದುಕೊಳ್ಳುತ್ತಿರುವುದು ಮಾತ್ರ ಸತ್ಯ.
Comments
Post a Comment