ರಾಜ್ಯದ ಕೊರೋನಾ ಸ್ಥಿತಿಗತಿಯ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದೇನು ಗೊತ್ತಾ

ರಾಜ್ಯದಲ್ಲಿ ಕೊರೋನಾ ಪರಿಸ್ಥಿತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಾತ್ರವಲ್ಲದೆ ಬೆಡ್ ಹಾಗೂ ಆಕ್ಸಿಜನ್ ಸಮಸ್ಯೆಗಳು ಹೆಚ್ಚಾಗುತ್ತಿದೆ ಇದು ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮಾತ್ರವಲ್ಲದೆ ಇದಕ್ಕೆ ಯಾವ ರೀತಿಯ ಸಲಹೆ ಸೂಚನೆಗಳನ್ನು ರಚಿಸುವುದು ಎಂಬುದು ದೊಡ್ಡ ಸವಾಲಗಿದ್ದು ಈ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತೊಂದು ಶಾಕಿಂಗ್ ಸುದ್ದಿ ನೀಡಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪರಿಸ್ಥಿತಿ ನಿಯಂತ್ರಣದಲ್ಲಿ ಇಲ್ಲ ಎಂದು ಹೇಳಿದ್ದಾರೆ. ಶುಕ್ರವಾರ ಆರೋಗ್ಯ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಬೆಂಗಳೂರಿನಲ್ಲಿ ವೆಂಟಿಲೇಟರ್ ಹಾಸಿಗೆಗಳನ್ನು 10 ಪಟ್ಟು ಹೆಚ್ಚಳ ಮಾಡುವಂತೆ ಸಿಎಂ ಆದೇಶಿಸಿದ್ದಾರೆ. ಪ್ರಸ್ತುತ 17 ಸರ್ಕಾರಿ ಆಸ್ಪತ್ರೆಗಳಲ್ಲಿ ಅಧಿಕೃತವಾಗಿ ಕೇವಲ 117 ಐಸಿಯು ವೆಂಟಿಲೇಟರ್ ಹಾಸಿಗೆಗಳು ಇವೆ. ನಗರದಲ್ಲಿ ಕೋವಿಡ್-19 ರೋಗಿಗಳಿಗೆ ಕೋವಿಡ್ ರೋಗಿಗಳಿಗೆ ಇವು ಮೀಸಲಾಗಿವೆ. ಶೇಕಡ 80 ರಷ್ಟು ಹಾಸಿಗೆ ಮೀಸಲಿಡುವಂತೆ ಖಾಸಗಿ ಆಸ್ಪತ್ರೆಗಳಿಗೆ ನಿರ್ದೇಶನ ನೀಡಲಾಗಿದೆ. ಎಲ್ಲಾ ನರ್ಸಿಂಗ್ ಹೋಂಗಳು ಮತ್ತು 30 ಹಾಸಿಗೆಗಳಿಗಿಂತ ಕಡಿಮೆ ಇರುವ ಆಸ್ಪತ್ರೆಗಳಲ್ಲಿ ಕೋವಿಡ್ ಅಲ್ಲದ ರೋಗಿಗಳಿಗೆ ಕಡ್ಡಾಯವಾಗಿ ಚಿಕಿತ್ಸೆ ನೀಡಬೇಕು. 30 ಕ್ಕಿಂತ ಹೆಚ್ಚು ಹಾಸಿಗೆ ಸಾಮರ್ಥ್ಯದ ಎಲ್ಲ ಆಸ್ಪತ್ರೆಗಳು ಶೇಕಡ 80 ರಷ್ಟು ಬೆಡ್ ಮತ್ತು ಐಸಿಯು ಸೌಲಭ್ಯವನ್ನು ರಾಜ್ಯಸರ್ಕಾರಕ್ಕೆ ನೀಡಬೇಕು ಎಂದು ಹೇಳಲಾಗಿದೆ.

ಇದುವರೆಗೆ ಕೇವಲ 50 ರಷ್ಟು ಬೆಡ್ ಗಳನ್ನು ಪಡೆಯಲಾಗುತ್ತಿತ್ತು. ಈಗ ಶೇಕಡ 80 ರಷ್ಟು ಬೆಡ್ ಗಳನ್ನು ನೀಡಬೇಕಿದೆ. ಇನ್ನು 15 ದಿನದಲ್ಲಿ ಕನಿಷ್ಠ ಎರಡು ಸಾವಿರ ತಾತ್ಕಾಲಿಕ ಐಸಿಯು ಬೆಡ್ ಗಳು ಸಿದ್ಧವಾಗಲಿವೆ. ಅವುಗಳಲ್ಲಿ 800 ರಷ್ಟು ಬೆಡ್ ಗಳಿಗೆ ವೆಂಟಿಲೇಟರ್ ವ್ಯವಸ್ಥೆ ಮಾಡಲಾಗುವುದು.

Comments