ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಪಕ್ಷ ತನ್ನ ಭದ್ರ ಬುನಾದಿಯನ್ನು ಹಾಕಿದೆ. ಮಾತ್ರವಲ್ಲದೆ ಪ್ರಸ್ತುತ ಆಡಳಿತದಲ್ಲಿರುವ ಬಿಜೆಪಿಯ ಪಕ್ಷ ಈಗಾಗಲೇ ಹಲವಾರು ಬಾರಿ ರಾಜ್ಯ ಹಾಗೂ ಜಿಲ್ಲಾ ವಾರು ಕ್ಷೇತ್ರಗಳಲ್ಲಿ ಅಧಿಕಾರವನ್ನು ಹಿಡಿದಿದೆ. ಮಾತ್ರವಲ್ಲದೆ ಇದು ಬಹುತೇಕ ಮೊದಲುಗಳಿಗೆ ಸಾಕ್ಷಿಯಾಗಿದೆ. ಸದ್ಯ ಬಿಜೆಪಿಗೆ ಮತ್ತೊಂದು ಪಕ್ಷ ಆಧಿಕಾರಕ್ಕೆರಲು ಬೆಂಬಲ ನೀಡಿದೆ.
ಭದ್ರವತಿಯಲ್ಲಿ ಭಯಮುಕ್ತ ಆಡಳಿತ ನೀಡುವುದು ನಮ್ಮ ಗುರಿ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ. ಮಾತ್ರವಲ್ಲದೆ ಎಲ್ಲಾ ವಾರ್ಡ್ ಗಳಲ್ಲಿ ಉತ್ತಮ ಆಡಳಿತವನ್ನು ನೀಡುವುದು ನಮ್ಮ ಪಕ್ಷದ ಉದ್ದೇಶ ಎಂದು ಹೇಳಿದರು. ಬಿಜೆಪಿಗೆ ಸ್ಪಷ್ಟ ಬಹುಮತದೊಂದಿಗೆ ಆಧಿಕಾರಕ್ಕೆರಲು ಸಾಧ್ಯವಾಗದ ಹಿನ್ನಲೆಯಲ್ಲಿ ಬಾಹ್ಯ ಬೆಂಬಲದ ಮೂಲಕ ಬಿಜೆಪಿ ಅಧಿಕಾರಕ್ಕೆರುವ ಸಾಧ್ಯತೆ ಇದೆ.
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ನೇತೃತ್ವದ ಅಣ್ಣಾ ಡಿಎಂಕೆ ಪಕ್ಷ ಬಿಜೆಪಿಗೆ ಬಾಹ್ಯ ಬೆಂಬಲ ನೀಡುವ ಮೂಲಕ ಬೆಂಬಲ ಘೋಷಿಸಿದೆ. ಮಾತ್ರವಲ್ಲದೆ ಬಾಹ್ಯ ಬೆಂಬಲದ ಪ್ರತಿಯನ್ನು ಅಣ್ಣಾ ಡಿಎಂಕೆ ತಾಲೂಕು ಅಧ್ಯಕ್ಷರು ಬಿಜೆಪಿಗೆ ನೀಡಿದರು. ಬಿಜೆಪಿಗೆ ಬೆಂಬಲಿಸುತ್ತಿರುವುದಕ್ಕೆ ಧನ್ಯವಾದ ಎಂದು ಈಶ್ವರಪ್ಪ ತಿಳಿಸಿದ್ದಾರೆ.
Comments
Post a Comment