ವಿಶ್ವದಲ್ಲಿ ಸರ್ಚ್ ಇಂಜಿನ್ ಗಳಿಗೆ ಭಾರೀ ಬೇಡಿಕೆ ಇದೆ. ಮಾತ್ರವಲ್ಲದೆ ಸರ್ಜ್ ಇಂಜಿನ್ ಗಳಲ್ಲಿ ದೈತ್ಯ ಸಂಸ್ಥೆಯೆಂದರೆ ಗೂಗಲ್. ವಿಶ್ವದಲ್ಲಿಯೇ ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ಗೂಗಲ್, ಭಾರೀ ಸಂಖ್ಯೆಯ ಬಳಕೆದಾರರನ್ನು ಹೊಂದಿರುವ ಗೂಗಲ್, ಚಂದಾದರಾರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡುವ ಮೂಲಕ ಬಳಕೆದಾರರಿಗೆ ಹೆಚ್ಚು ಹತ್ತಿರವಾಗಿರುವ ಸರ್ಚ್ ಇಂಜಿನ್.
ವಿಶ್ವದಲ್ಲಿ ಬಹುತೇಕ ಸರ್ಚ್ ಇಂಜಿನ್ ಗಳಿದ್ದರೂ ಗೂಗಲ್ ನಲ್ಲಿ ಕೆಲಸ ಮಾಡಬೇಕು ಎಂಬುದು ಬಹುತೇಕ ಯುವಕರ ಕನಸಾಗಿರುತ್ತದೆ. ಗೂಗಲ್ ವಿಶ್ವದ ದೈತ್ಯ ಕಂಪೆನಿಯಾಗಿರುವುದರಿಂದ ಎಲ್ಲಾರೂ ಅದರಲ್ಲಿ ಕೆಲಸ ಮಾಡಬೇಕು ಎಂಬುದು ಬಹುತೇಕ ಕನಸಾಗಿರುತ್ತದೆ. ಸದ್ಯ ಭಾರತ ಮೂಲದ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿರುವ ಸುಂದರ್ ಪಿಚೈ ಅವರು ಕಳೆದ ವರ್ಷ ಪಡೆದ ವೇತನ ಕೇಳಿದರೆ ನಿಜಕ್ಕೂ ಶಾಕ್ ಆಗುತ್ತೀರಿ.
ಭಾರತ ಮೂಲಕ ಸುಂದರ್ ಪಿಚೈ ಅವರು ಕಳೆದ ವರ್ಷ ಸೌಮಾರು 67 ಕೋಟಿ ರೂಪಾಯಿಯಷ್ಟು ವೇತನ ಪಡೆದಿದ್ದಾರೆ ಎಂದು ಹೇಳಲಾಗಿದೆ. ಇದರಲ್ಲಿ ಸುಮಾರು 15 ಕೋಟಿಯಷ್ಟು ಮೂಲ ವೇತನವಾಗಿದ್ದು ಉಳಿದ ಮೊತ್ತ ಭತ್ಯೆ ಹಾಗೂ ಇನ್ನಿತರ ಮೊತ್ತಗಳಾಗಿರುತ್ತದೆ ಈ ಸುದ್ದಿ ಸದ್ಯ ಭಾರೀ ವೈರಲ್ ಆಗುತ್ತಿದೆ.
Comments
Post a Comment