ಪ್ರಧಾನಿ ನರೇಂದ್ರ ಮೋದಿಗೆ ಕರೆ ಮಾಡಿದ ಅಮೆರಿಕದ ಅಧ್ಯಕ್ಷ ಜೋ ಬೈಡನ್

ಭಾರತ ದೇಶದಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಡುವೆ ಆಕ್ಸಿಜನ್ ಹಾಗೂ ಅಸ್ಪತ್ರೆಗಳ ಬೆಡ್ ಗಾಗಿ ಹಾಹಕಾರ ಆರಂಭವಾಗಿದೆ. ಕೊರೋನಾದ ಲಿಂಕ್ ಕಟ್ ಮಾಡಲು ಈಗಾಗಲೇ ಹಲವಾರು ರಾಜ್ಯಗಳು ಲಾಕ್ ಡೌನ್ ಅಸ್ತ್ರವನ್ನು ಪ್ರಯೋಗಿಸಿದೆ. ಒಂದು ಕಡೆ ಕೊರೋನಾ ಸೋಂಕು ಹೆಚ್ಚಾಗ್ಗುತ್ತಿದ್ದರೆ ಮತ್ತೊಂದು ಕಡೆ ಭಾರತದ ಮಿತ್ರ ರಾಷ್ಟ್ರ ಎಂದು ಹೇಳಿಕೊಳ್ಳುತ್ತಿದ್ದ ಅಮೆರಿಕಾ, ತನ್ನ ಹಳೆ ಚಾಲಿಯನ್ನು ಮುಂದುವರಿಸಿದೆ.

ಕೊರೋನಾದ ಮೊದಲನೇ ಅಲೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದ ಭಾರತ, ಆರಂಭದಲ್ಲೇ ಲಾಕ್ ಡೌನ್ ಮಾಡುವ ಮೂಲಕ ಮೊದಲ ಆಲೆಯನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದೆ. ಸದ್ಯ ದೇಶದಲ್ಲಿ ಎರಡನೇ ಆಲೆ ಆರಂಭವಾಗಿದ್ದು, ಭಾರತದ ಈ ಪರಿಸ್ಥಿತಿಗೆ ಇಡೀ ವಿಶ್ವವೇ ಅತಂಕ ವ್ಯಕ್ತಪಡಿಸಿದ್ದು, ಬಹುತೇಕ ರಾಷ್ಟ್ರಗಳು ಸಹಾಯದ ಭರವಸೆ ನೀಡಿದೆ. ಮೊದಲನೇ ಆಲೆ ಎದುರಿಸಿದ್ದ ಸಂಧರ್ಭದಲ್ಲಿ ಭಾರತ ವಿಶ್ವದ ಬಹುತೇಕ ರಾಷ್ಟ್ರಗಳಿಗೆ ನೆರವು ನೀಡಿತ್ತು ಅದರೆ ಈ ಸಹಾಯವನ್ನು ಅಮೆರಿಕಾ ನೆನಪಿನಲ್ಲಿಟ್ಟುಕೊಂಡತ್ತಿಲ್ಲ. 

ಭಾರತ ಅಂದು ಮಾಡಿದ ಸಹಾಯವನ್ನು ಮರೆತ ವಿಶ್ವದ ದೊಡ್ಡಣ್ಣ ಇಂದು ಭಾರತಕ್ಕೆ ಕೋವಿಶಿಲ್ಡ್ ವ್ಯಾಕ್ಸಿನ್ ತಯಾರಿಕೆಗೆ ಬೇಕಾದ ಅಗತ್ಯ ಕಚ್ಚಾ ವಸ್ತುಗಳ ರಫ್ತನ್ನು ತಡೆಹಿಡಿಯುವ ಮೂಲಕ ತನ್ನ ಹಳೆಯ ಚಾಲಿಯನ್ನು ಮುಂದುವರಿಸಿದೆ. ಸದ್ಯ ಈ ನಡೆಗೆ ಅಮೆರಿಕಾದ ಸಂಸದರು ಹಾಗೂ ಹಿರಿಯ ಪ್ರತಿನಿಧಿಗಳು ತೀವ್ರ ಬೇಸರ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಪ್ರಧಾನಿ ಮೋದಿಗೆ ಕರೆ ಮಾಡಿದ ಅಮೆರಿಕಾದ ಅಧ್ಯಕ್ಯ ಜೋ ಬೈಡನ್ ಕಚ್ಚಾ ವಸ್ತುಗಳ ಅಮದು ಮಾಡಿಕೊಳ್ಳಲು ನಿರ್ಬಂಧ ವಿಧಿಸುವುದಿಲ್ಲ ಎಂಬುದನ್ನು ತಿಳಿಸಿದ್ದಾರೆ. ಈ ಮೂಲಕ ಕೊನೆಗೂ ಅಮೆರಿಕಾ ತನ್ನ ಪಟ್ಟು ಸಡಿಲಿಸಿದೆ.

Comments