
ಎಸ್.ಎಂ ಕೃಷ್ಣ ಅವರು ಬಿಜೆಪಿಗೆ ಸೇರಿದ ಬಳಿಕ ರಾಜಕೀಯವಾಗಿ ಅಷ್ಟು ಸಕ್ರೀಯರಾಗಿಲ್ಲ ಅದರೂ ಕೆಲವು ಚುನಾವಣಾ ಪ್ರಚಾರಗಳಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಎಸ್.ಎಂ ಕೃಷ್ಣ ಅವರ ಮುಡಿಗೆ ಮತ್ತೊಂದು ಗೌರವ ದೊರಕಿದೆ. ಮಹಾತ್ಮ ಗಾಂಧೀಜಿಯವರ ೧೫೦ನೇ ಜನ್ಮ ಶತಮಾನತ್ಸೋದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಎಸ್.ಎಂ ಕೃಷ್ಣ ಅವರಿಗೆ ಮಹಾತ್ಮ ಗಾಂಧೀಜಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಈ ಸಂಧರ್ಭದಲ್ಲಿ ಮಾತನಾಡಿದ ಕೃಷ್ಣ ಅವರು ನಾವೂ ಎಂದಿಗೂ ಮಹಾತ್ಮ ಗಾಂಧೀಜಿಯಾಗಲು ಸಾಧ್ಯವಿಲ್ಲ. ಅದರೆ ಅವರ ಅನುಯಾಯಿಗಳಾಗಿ ಅವರ ತತ್ವ ಹಾಗೂ ಆದರ್ಶಗಳನ್ನು ಪಾಲಿಸಬೇಕು ಎಂದರು. ಮುಂದುವರಿದು ಮಾತನಾಡಿದ ಅವರು ನಾನು ಗಾಂಧೀಜಿಯವರನ್ನು ಎರಡು ಬಾರಿ ಭೇಟಿಯಾಗಿದ್ದೇನೆ ಅದು ನನ್ನ ಪುಣ್ಯ ಎಂದು ಹೇಳಿದರು.
Comments
Post a Comment