ಪಂಚ ರಾಜ್ಯಗಳ ಮತಗಟ್ಟೆ ಸಮೀಕ್ಷೆ ಬಹಿರಂಗ: ಯಾವ ಪಕ್ಷಕ್ಕೆ ಒಲಿಯಲಿದೆ ಅಧಿಕಾರದ ಭಾಗ್ಯ.? ಇಲ್ಲಿದೆ ಸಮೀಕ್ಷೆಯ ವರದಿ

ದೇಶದಲ್ಲಿ ಸದ್ಯ ಕೊರೋನಾದ ಆಲೆ ಜೋರಾಗಿದ್ದರು ಕಳೆದ ತಿಂಗಳಿನಲ್ಲಿ ಚುನಾವಣಾ ರಣಕಣ ಜೋರಾಗಿತ್ತು. ಭಾರತದ ಪ್ರಮುಖ ರಾಜ್ಯಗಳಾದ ಅಸ್ಸಾಂ, ಪಶ್ಚಿಮಬಂಗಾಳದ ಹಾಗೂ ಕೇರಳದಲ್ಲಿ ಚುನಾವಣೆಗಳು ಈಗಾಗಲೇ ನಡೆದಿದೆ. ಈ ರಾಜ್ಯಗಳ ಚುನಾವಣೆಗಳ ಮತಗಟ್ಟೆ ಸಮೀಕ್ಷೆ ಈಗಾಗಲೇ ಹೊರಬಿದ್ದಿದೆ. ಈ ರಾಜ್ಯಗಳಲ್ಲಿ ಯಾರು ಅಧಿಕಾರದ ಗದ್ದುಗೆ ಏರಲಿದ್ದಾರೆ ಎಂಬುದು ಸದ್ಯದ ಪ್ರಶ್ನೆ.

ದೇಶದಲ್ಲಿ ನಡೆದ ಈ ಎಲ್ಲಾ ಚುನಾವಣೆಗಳಲ್ಲಿ ಅತ್ಯಂತ ಕುತೂಹಲಕ್ಕೆ ಕಾರಣವಾಗಿರುವ ಚುನಾವಣಾ ರಾಜ್ಯವೆಂದರೆ ಅದು ಪಶ್ಚಿಮ ಬಂಗಾಳ. ಮೋದಿ ಹಾಗೂ ಮಮತಾ ಬ್ಯಾನರ್ಜಿ ಅವರ ನೇರಾ ನೇರಾ ಸ್ಪರ್ಧೆ ಎದುರಾಗಿತ್ತು, ಸದ್ಯ ಸಮೀಕ್ಷೆಯಲ್ಲಿ ಬಹಿರಂಗವಾಗಿರುವ ಮಾಹಿತಿಯ ಪ್ರಕಾರ ಪಶ್ಚಿಮಬಂಗಾಳದಲ್ಲಿ ಮತ್ತೊಮ್ಮೆ ಈ ಬಾರಿ ಟಿಎಂಸಿ ಅಧಿಕಾರದ ಗದ್ದುಗೆ ಏರಲಿದ್ದಾರೆ ಎಂದು ಹೇಳಲಾಗುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಸುಮಾರು 160ಕ್ಕೂ ಹೆಚ್ಚು ಸ್ಥಾನಗಳನ್ನು ಟಿಎಂಸಿ ಗೆಲ್ಲಲಿದೆ ಎಂದು ಹೇಳಲಾಗುತ್ತಿದೆ.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅತ್ಯಂತ ಕಠಿಣ ಸ್ಪರ್ಧೆ ನೀಡಿದ್ದು ಇದು ಟಿಎಂಸಿಗೆ ಎಚ್ಚರಿಕೆಯ ಗಂಟೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಕೇರಳ ಹಾಗೂ ಅಸ್ಸಾಂ ರಾಜ್ಯಗಳಲ್ಲಿ ಪಿನರಾಯಿ ವಿಜಯನ್ ಹಾಗೂ ಬಿಜೆಪಿ ಕ್ರಮವಾಗಿ ಅಧಿಕಾರದ ಗದ್ದುಗೆ ಏರಲಿದೆ ಎಂದು ಹೇಳಲಾಗುತ್ತಿದೆ. ಕರ್ನಾಟಕದ ಉಪಚುನಾವಣೆಯ ಮಾಹಿತಿಯೂ ಹೊರಬಿದ್ದಿದ್ದು ಕರ್ನಾಟಕದಲ್ಲಿ 3 ಕ್ಷೇತ್ರಗಳ ಉಪಚುನಾವಣೆಯಲ್ಲಿ 2 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ, 1 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಹೇಳಲಾಗುತ್ತಿದೆ.

Comments