ಬಿಜೆಪಿ ಸರ್ಕಾರದ ವಿರುದ್ದ ಮತ್ತೊಮ್ಮೆ ಕುಟುಕಿದ ಹಳ್ಳಿ ಹಕ್ಕಿ ವಿಶ್ವನಾಥ್

ಭಾರತ ದೇಶದಲ್ಲಿ ಸದ್ಯ ಒಂದು ರೀತಿಯ ಆಘೋಷಿತ ಲಾಕ್ ಡೌನ್ ಘೋಷಣೆಯಾದಂತಿದೆ. ದೇಶದಲ್ಲಿ ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಒಂದು ಕಡೆಯಾದರೆ ದೇಶದ ಬಹುತೇಕ ರಾಜ್ಯಗಳು ಸದ್ಯ ಲಾಕ್ ಡೌನ್ ಘೋಷಣೆ ಮಾಡಿದೆ. ಭಾರತ ಮೊದಲನೇಯ ಕೊರೋನಾ ಆಲೆಯನ್ನು ಯಶಸ್ವಿಯಾಗಿ ನಿಭಾಯಿಸುವ ಮೂಲಕ ವಿಶ್ವದ ಬಹುತೇಕ ರಾಷ್ಟ್ರಗಳಿಗೆ ಮಾದರಿಯಾಗಿತ್ತು, ಅದರೆ ಎರಡನೇ ಆಲೆ ಮಾತ್ರ ಭಾರತವನ್ನು ಮತ್ತೊಮ್ಮೆ ಅತ್ಯಂತ ಕಠಿಣ ಪರಿಸ್ಥಿತಿಗೆ ನೂಕಿದೆ.

ಭಾರತದ ಬಹುತೇಕ ರಾಜ್ಯಗಳು ಕೊರೋನಾದ ಹಾಟ್ ಸ್ಪಾಟ್ ಗಳಾಗಿ ಗುರುತಿಸಿಕೊಂಡಿದೆ ಅದರಲ್ಲಿ ಪ್ರಮುಖವಾದ ರಾಜ್ಯವೆಂದರೆ ಕರ್ನಾಟಕವೂ ಒಂದು. ಕರ್ನಾಟಕದಲ್ಲಿ ಕೊರೋನಾದ ಸಮಸ್ಯೆಗಳು ಒಂದು ಕಡೆಯಾದರೆ ರಾಜಕೀಯದ ಮೇಲಾಟಗಳು ಇನ್ನೊಂದು ಕಡೆ ನಡೆಯುತ್ತಿದೆ. ಕರ್ನಾಟಕದಲ್ಲಿ ಸದ್ಯ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದೆ ಅದರೆ ಈ ಸರ್ಕಾರ ಕೊರೋನಾ ತಡೆಯುವಲ್ಲಿ ವಿಫಲವಾಗಿದೆ ಎಂಬುದು ಬಹುತೇಕ ಸ್ವಪಕ್ಷೀಯ ನಾಯಕರ ವಾದ.

ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಬಹಳ ವಿಭಿನ್ನವಾಗಿ ಕಾಣಿಸುವ ಬಿಜೆಪಿಯ ಹಾಲಿ ಎಂ.ಎಲ್.ಸಿ ಹಾಗೂ ಲೇಖಕರು ಆಗಿರುವ ವಿಶ್ವನಾಥ್ ಅವರು ಬಿಜೆಪಿ ಸರ್ಕಾರದ ವಿರುದ್ದ ಮತ್ತೇ ತಮ್ಮ ಮಾತಿನ ಪ್ರಹಾರ ನಡೆಸಿದ್ದಾರೆ. ವಿಶ್ವನಾಥ್ ಅವರು ಬಿಜೆಪಿ ಪಕ್ಷದವರಾದೆ ಅದ ವಿಶ್ವನಾಥ್ ಬಿಜೆಪಿ ಸರ್ಕಾರದ ವಿರುದ್ದ ವಾ-ಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು ಬಿಜೆಪಿ ಸರ್ಕಾರ ಕೊರೋನವನ್ನು ತಡೆಯುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಹೇಳಿದ್ದಾರೆ. ಇದು ವಿಪಕ್ಷಗಳಿಗೆ ಸುಲಭವಾದ ಆಹಾರವಾಗಿ ಪರಿಣಮಿಸಿದೆ.

Comments