ಇದೀಗ ಬಂದ ಸುದ್ದಿ: ರಾಜ್ಯ ಬಿಜೆಪಿ ನಾಯಕರಿಗೆ ಖಡಕ್ ಸಂದೇಶ ರವಾನಿಸಿದ ಬಿಜೆಪಿ ಹೈಕಮಾಂಡ್.! ವರಿಷ್ಠರು ಕೊಟ್ಟ ಆ ಸಂದೇಶ ಯಾವುದು
ರಾಜ್ಯ ರಾಜಕೀಯದಲ್ಲಿ ನಾಟಕೀಯ ಬೆಳವಣಿಗೆಗಳು ನಡೆಯುತ್ತಿರುವುದನ್ನು ನೀವೂ ಕಳೆದ ಕೆಲವು ದಿನಗಳಿಂದ ನೋಡಿರಬಹುದು. ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದ್ದರು ಅಂತರಿಕ ಒಳ ಜಗಳಗಳು ಹೆಚ್ಚಾಗುತ್ತಿದೆ. ಯತ್ನಾಳ್ ಕಳೆದ ಹಲವು ಸಮಯಗಳಿಂದ ಬಿಜೆಪಿ ಸರ್ಕಾರ ವಿರುದ್ದ ಟೀಕೆ ಮಾಡುತ್ತಿರುವುದರ ಜೊತೆಗೆ ಇತ್ತೀಚೆಗೆ ಕೆ.ಎಸ್ ಈಶ್ವರಪ್ಪರವರ ನಡವಳಿಕೆ ರಾಜ್ಯ ಸರ್ಕಾರಕ್ಕೆ ಮುಜುಗರ ತರುವಂತಹ ಘಟನೆ ನಡೆದಿದೆ.
ಈ ಬಗ್ಗೆ ಸದ್ಯ ರಾಜ್ಯ ಬಿಜೆಪಿಯು ಗಮನ ಹರಿಸಿದ್ದು ರಾಜ್ಯ ನಾಯಕರಿಗೆ ಕಠಿಣ ಸಂದೇಶ ರವಾನಿಸಲಾಗಿದೆ. ಈ ಮೂಲಕ ಹೈಕಮಾಂಡ್ ಈ ವಿಷಯದ ಬಗ್ಗೆ ಚಿಂತನೆ ನಡೆಸುತ್ತಿದೆ ಎಂಬ ಮಾತುಗಳು ದಟ್ಟವಾಗಿವೆ. ಪಕ್ಷದ ಬಗ್ಗೆ ಹಾಗೂ ಸರ್ಕಾರದ ಬಗ್ಗೆ ಹಾದಿ ಬೀದಿಯಲ್ಲಿ ನಿಂತು ಮಾತನಾಡುವುದು ಸರಿಯಲ್ಲ ಎಂದು ಹೈಕಮಾಂಡ್ ಗೆ ಏಚ್ಚರಿಕೆ ನೀಡಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಹಾಗೂ ರಾಜ್ಯ ಉಸ್ತುವಾರಿ ಅರುಣ ಸಿಂಗ್ ಎಲ್ಲಾ ವಿಷಯಗಳನ್ನು ಪಡೆದಿದ್ದು ಒಟ್ಟಾರೆಯಾಗಿ ಈ ಎಲ್ಲಾ ಬೆಳವಣಿಗೆಗಳು ಬಾರಿ ಸಂಚಲನ ಉಂಟು ಮಾಡಿವೆ. ಒಟ್ಟಾರೆಯಾಗಿ ಈ ಬಗ್ಗೆ ರಾಜ್ಯಾಧ್ಯಕ್ಷ ನಳೇನ್ ಕುಮಾರ್ ಕಟೀಲ್ ಅವರಿಗೆ ಕಠಿಣ ಸಂದೇಶ ರವಾನಿಸಿದ್ದು ಪಕ್ಷದ ಹಾಗೂ ರಾಜ್ಯ ಸರ್ಕಾರದ ವಿರುದ್ದ ಮಾತನಾಡುವವರ ವಿರುದ್ದ ಕಠಿಣ ಕ್ರಮ ಜಾರಿ ಮಾಡಿ ಎಂದು ತಿಳಿಸಿದ್ದಾರೆ ಎನ್ನಲಾಗುತ್ತಿದೆ.
Comments
Post a Comment