ರಾಜಕೀಯವೆಂದರೆ ಆಗೇ ಯಾರಿಗೂ ಯಾವ ಪಕ್ಷ ಹಿತವೆನಿಸುತ್ತದೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ರಾಜಕೀಯದಲ್ಲಿ ಹುಟ್ಟು ನೀಡಿದ ಪಕ್ಷವನ್ನು ತೊರೆದು ಇತರ ಪಕ್ಷಗಳಿಗೆ ವಲಸೆ ಹೋದ ಅದೆಷ್ಟೋ ನಿದರ್ಶನಗಳು ಕರ್ನಾಟಕ ರಾಜ್ಯದ ರಾಜಕೀಯ ಇತಿಹಾಸದಲ್ಲಿದೆ ಅದರೆ ಅದು ಕೆಲ ಸಂಧರ್ಭದಲ್ಲಿ ಒಳಿತು ಎಂದಾದರೆ ಇನ್ನು ಆನೇಕ ಬಾರಿ ಅದು ಪಕ್ಷಾಂತರಿ ಎಂಬ ಹಣೆಪಟ್ಟಿಯನ್ನು ಕಟ್ಟಿಕೊಳ್ಳಬೇಕು ಎಂಬುದು ಕೂಡ ಸತ್ಯ.
ಕರ್ನಾಟಕ ರಾಜ್ಯದಲ್ಲಿ ಸದ್ಯ ಉಪಚುನಾವಣೆಗಳ ಗದ್ದಲ ಆರಂಭವಾಗಿರುವುದರಿಂದ ಪಕ್ಷಾಂತರದ ಸುದ್ದಿಯು ಜೋರಾಗಿದೆ. ಸದ್ಯ ಭಾಲ್ಕಿ ಮಾಜಿ ಶಾಸಕ ಪ್ರಕಾಶ ಖಂಡ್ರೆ ಅವರು ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಬಿಜೆಪಿಯಲ್ಲಿನ ವಿರೋಧದ ನಡುವೆಯೂ ಪ್ರಕಾಶ ಖಂಡ್ರೆ ಅವರು ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
ಬಸವಕಲ್ಯಾಣದಲ್ಲಿ ಉಪಚುನಾವಣೆಯ ಪ್ರಚಾರ ಜೋರಾಗಿದೆ.ಇದೇ ಸಂಧರ್ಭದಲ್ಲಿ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ಪ್ರಕಾಶ್ ಖಂಡ್ರೆ ಬಿಜೆಪಿಗೆ ಸೇರ್ಪಡೆಗೊಂಡರು. ಪ್ರಕಾಶ್ ಖಂಡ್ರೆ ಪಕ್ಷಕ್ಕೆ ಸೇರ್ಪಡೆಗೊಂಡಿರುವುದರಿಂದ ಮತ್ತಷ್ಟು ಬಲ ಬಂದಂತಾಗಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಬಸವಕಲ್ಯಾಣದ ಚುನಾವಣಾ ಸಂಧರ್ಭದಲ್ಲಿ ಬಿಜೆಪಿ ಸೇರಿರುವುದು ಪಕ್ಷಕ್ಕೆ ಮತ್ತಷ್ಟು ಬಲ ಹೆಚ್ಚಿಸಿದೆ ಎಂದು ಹೇಳಲಾಗುತ್ತಿದೆ.
Comments
Post a Comment