ಕುತೂಹಲಕ್ಕೆ ಕಾರಣವಾಯ್ತು ಯಡಿಯೂರಪ್ಪ ಬಗ್ಗೆ ಸಿ.ಟಿ ರವಿ ನೀಡಿದ ಆ ಒಂದು ಹೇಳಿಕೆ

ಕರ್ನಾಟಕದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ ಎಂಬ ವಿಷಯಗಳು ಹಲವಾರು ಸಮಯಗಳಿಂದ ಕೇಳಿ ಬರುತ್ತಿರುವ ಮಾತು. ಯಡಿಯೂರಪ್ಪ ಬಳಿಕ ಅವರ ಉತ್ತರಾಧಿಕಾರಿಯಾಗಿ ಯಾರು ಆಯ್ಕೆಯಾಗುತ್ತರೆ ಎಂಬ ಪ್ರಶ್ನೆ ಕರ್ನಾಟಕ ರಾಜಕೀಯದಲ್ಲಿ ದಟ್ಟವಾಗಿ ಕಾಡುತ್ತಿರುವ ಪ್ರಶ್ನೆ. ಯಡಿಯೂರಪ್ಪ ಒರ್ವ ಶ್ರೇಷ್ಥ ನಾಯಕ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಸದ್ಯ ಯಡಿಯೂರಪ್ಪರ ರೀತಿಯಲ್ಲಿ ವರ್ಚಸ್ಸು ಹೊಂದಿರುವ ನಾಯಕ ಕರ್ನಾಟಕದಲ್ಲಿ ಯಾರು ಇಲ್ಲ. ಯಡಿಯೂರಪ್ಪರ ಉತ್ತರಾಧಿಕಾರಿಯಾಗಿ ಅವರ ಮಗ ಬಿ.ವೈ ವಿಜಯೇಂದ್ರ ಮುಂಚೂಣಿಗೆ ಬರುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅದರೆ ವಿಶೇಷವೆನೆಂದರೆ ಬಿಜೆಪಿಯಲ್ಲಿ ಕುಟುಂಬ ರಾಜಕೀಯಕ್ಕೆ ಅಸ್ಪದವಿಲ್ಲ ಎಂಬುದು ಮೂಲ ಮಂತ್ರ.

ಕರ್ನಾಟಕ ರಾಜಕೀಯದಲ್ಲಿ ಸದ್ಯ ಬಿ ವೈ ವಿಜಯೇಂದ್ರ ಬೆಳೆಯುತ್ತಿರುವ ನಾಯಕ. ಹಲವಾರು ಉಪಚುನಾವಣೆಗಳ ಉಸ್ತುವಾರಿಯನ್ನು ವಹಿಸಿಕೊಂಡು ಗೆದ್ದು, ತಾನು ಕೂಡ ತಂದೆಯಂತೆ ಸಮರ್ಥ ನಾಯಕ ಎಂದು ಈಗಾಗಲೇ ಸಾಭೀತುಪಡಿಸಿದ್ದಾರೆ. ಸದ್ಯ ಯಡಿಯೂರಪ್ಪರ ಬಳಿಕ ವಿಜಯೇಂದ್ರ ರಾಜ್ಯ ಬಿಜೆಪಿಯ ಮುಂದಾಳತ್ವ ವಹಿಸಿಕೊಳ್ಳಬಹುದ ಎಂಬ ಚರ್ಚೆಗಳು ಜೋರಾಗಿದೆ. ಅದರೆ ಇದಕ್ಕೆ ಸ್ವ-ಪಕ್ಷದಲ್ಲೇ ವಿರೋಧಗಳು ಕೂಡ ಇದೆ. ಸದ್ಯ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಈ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದು, ಬಿಜೆಪಿಯಲ್ಲಿ ಉತ್ತರಾಧಿಕಾರಿ ಸಂಪ್ರದಾಯವಿಲ್ಲ ಎಂದು ಹೇಳಿದ್ದಾರೆ.

ಯಡಿಯೂರಪ್ಪ ಅಥವಾ ಯಾರೇ ನಾಯಕರೂ ಬಿಜೆಪಿಯ ಮಾಲಕರಲ್ಲ ಬದಲಿಗೆ ಅವರು ಪಕ್ಷದ ನಾಯಕರು. ನಮ್ಮ ಪಕ್ಷದ ಮಾಲಕರು ಕಾರ್ಯಕರ್ತರು ಎಂದು ಹೇಳಿದ್ದಾರೆ.ಒಟ್ಟಾರೆಯಾಗಿ ಬಿ.ವೈ ವಿಜಯೇಂದ್ರ ಅವರನ್ನು ಕರ್ನಾಟಕ ಬಿಜೆಪಿ ಉತ್ತರಾಧಿಕಾರಿ ಎಂದು ಬಿಂಬಿಸುತ್ತಿರುವುದಕ್ಕೆ ಸಿ.ಟಿ ರವಿ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ ಎಂದು ಅವರ ಹೇಳಿಕೆಯನ್ನು ಬಣ್ಣಿಸಲಾಗುತ್ತಿದೆ.

Comments