ದೇಶದಲ್ಲಿ ಚುನಾವಣಾ ಕಾವು ಏರುತ್ತಿರುವ ಬೆನ್ನಲ್ಲೇ ಹಲವಾರು ರಾಜಕೀಯ ಘಟನೆಗಳು ಸುದ್ದಿಯಾಗುತ್ತಿದೆ. ೨೦೨೪ರ ಲೋಕಸಭಾ ಚುನಾವಣೆ ಹಾಗೂ ಅದಕ್ಕೂ ಪೂರ್ವಭಾವಿಯಾಗಿ ನಡೆಯುವ ಎಲ್ಲಾ ವಿಧಾನಸಭ ಅಚುನವಣೆಗಳ ಬಗ್ಗೆ ಭಾರೀ ಚರ್ಚೆಗಳು ಆರಂಭವಾಗಿದೆ. ದೇಶದ ಚುನಾವಣಾ ಇತಿಹಾಸದಲ್ಲಿ ಭಾರೀ ಸುದ್ದಿಯಲ್ಲಿರುವ ಪಶ್ಚಿಮಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರದ ಗದ್ದುಗೆ ಏರಲಿದೆ ಎಂಬುದು ಭಾರೀ ಕುತೂಹಲ ಕೇರಳಿಸಿದೆ. ಆಡಳಿತ ಪಕ್ಷ ಟಿ.ಎಂ.ಸಿ ಹಾಗೂ ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಡಲಿದೆ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ.
೨೦೨೪ರ ಲೋಕಸಭಾ ಚುನಾವಣೆಗೂ ಮೊದಲು ಭಾರೀ ಕುತೂಹಲವನ್ನು ಕೇರಳಿಸಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯೂ ಯಾರ ಮುಡಿಗೆ ಜಯದ ಮಾಲೆ ಬೀಳಲಿದೆ ಎಂಬ ಪ್ರಶ್ನೆಗೆ ಇನ್ನೂ ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ. ಈ ಎಲ್ಲಾದರ ನಡುವೆ ಮಮತಾ ಬ್ಯಾನರ್ಜಿ ಎಲ್ಲಾ ವಿಪಕ್ಷಗಳಿಗೆ ಬರೆದಿದ್ದು. ನರೇಂದ್ರ ಮೋದಿ ಹಾಗೂ ಬಿಜೆಪಿ ಪಕ್ಷವನ್ನು ಎದುರಿಸಲು ನಾವೆಲ್ಲ ಒಗ್ಗಾಟ್ಟಗಿ ಕೆಲಸ ಮಾಡಬೇಕು ಎಂದು ಪತ್ರದಲ್ಲಿ ಉಲ್ಲೇಶಿಸಿದ್ದಾರೆ. ಒಟ್ಟಾಗಿ ಕೆಲಸ ನಿರ್ವಹಿಸಿದರೆ ಮಾತ್ರ ಬಿಜೆಪಿ ಸರ್ಕಾರವನ್ನು ಸೋಲಿಸಬಹುದು ಎಂಬುದು ಮಮತಾ ಬ್ಯಾನರ್ಜಿ ಅವರ ಮಾತಿನ ತಾತ್ಪರ್ಯ.
೨೦೧೯ರಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಸೋಲಿಸಲು ಎಲ್ಲಾ ಪಕ್ಷಗಳು ಸೇರಿ ಮಹಾಘಟಬಂಧನ್ ರಚಿಸಿದ್ದವು. ಅದರೆ ಇದು ಯಶಸ್ವಿಯಗಲಿಲ್ಲ. ಮಹಾಘಟಬಂಧನ್ ನಲ್ಲಿ ಅಂತರಿಕ ಒಡಕು ಹಾಗೂ ಇನ್ನಿತರ ಕಾರಣಗಳಿಂದಾಗಿ ಮಹಾಘಟಬಂಧನ್ ಬಿಜೆಪಿ ಎದುರು ಸೋಲಬೇಕಾಯಿತು. ಮಹಾಘಟಬಂಧನ್ ಗೆ ಕರ್ನಾಟಕದ ಪ್ರಾದೇಶಿಕ ಪಕ್ಷ ಜೆಡಿಎಸ್ ಸೇರಿಕೊಂಡಿತ್ತು. ಮಾತ್ರವಲ್ಲದೆ ಬಳಿಕ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ದೇವೆಗೌಡ ಹೇಳಿದ ಮಾತೊಂದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಎಲ್ಲಾರೋ ಒಟ್ಟಾರೆಯಾಗಿ ಕಾರ್ಯನಿರ್ವಹಸಿದರೆ ಮಾತ್ರ ಗೆಲ್ಲಲು ಸಾಧ್ಯ ಎಂದು ದೇವೆಗೌಡ ಹೇಳಿದ್ದಾರು. ಅದರೆ ಮಹಾಘಟಬಂಧನ್ ಸರಿಯಾಗಿ ಒಗ್ಗಟ್ಟಿನ ಬಿರುಕು ಉಂಟಾಗಿದ್ದರಿಂದ ಗೆಲ್ಲಲು ಸಾಧ್ಯವಾಗಲಿಲ್ಲ. ಸದ್ಯ ಇದೇ ಮಾತನ್ನು ಮಮತಾ ಬ್ಯಾನರ್ಜಿಯೂ ಹೇಳಿದ್ದೂ, ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ಗೆಲುವು ಸಾಧ್ಯ ಎಂದು ಹೇಳಿದರು.
Comments
Post a Comment