ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಳೆದ ಭಾರೀ ಅದ ಸಮಸ್ಯೆಗಳನ್ನು ತಪ್ಪಿಸಲು ಈ ಬಾರಿ ಸರ್ಕಾರ ಎಲ್ಲಾ ರೀತಿಯಲ್ಲೂ ಸರ್ವಸನ್ನಾದಗಿದೆ ಎಂದು ಈಗಾಗಲೇ ಸರ್ಕಾರದ ಮೂಲಗಳು ಘೋಷಿಸಿಕೊಂಡಿವೆ. ಲಾಕ್ ಡೌನ್ ಜಾರಿಗೊಳಿಸದೆ ಟಫ್ ರೂಲ್ಸ್ ಗಳ ಮೂಲಕ ಜನರಿಗೆ ನಿಯಮಗಳನ್ನು ಮಾಡುವ ಸಲುವಾಗಿ ಕಳೆದ ರಾತ್ರಿ ಹೊಸ ಮಾರ್ಗ ಸೂಚಿಯೊಂದನ್ನು ಸರ್ಕಾರ ಜಾರಿಗೊಳಿಸಿತ್ತು. ಇದರನ್ವಯ ಶಾಲಾ-ಕಾಲೇಜು ಹಾಗೂ ಜೀಮ್, ಸಿನಿಮಾ ಮಂದಿರ ಇನ್ನಿತರ ಕ್ಷೇತ್ರಗಳಿಗೆ ಕಠಿಣ ನಿಯಮನ್ನು ಜಾರಿಗೊಳಿಸಲಾಗಿತ್ತು. ಮಾತ್ರವಲ್ಲದೆ ಸಿನಿಮಾ ಮಂದಿರದಲ್ಲಿ ಕೇವಲ 50 ಶೇ ದಷ್ಟು ಜನರಿಗೆ ಮಾತ್ರ ಅವಕಾಶ ಎಂದು ಹೇಳಲಾಗಿತ್ತು.
ರಾಜ್ಯ ಸರ್ಕಾರದ ಈ ನಿರ್ಧಾರದ ಬಗ್ಗೆ ಕರ್ನಾಟಕ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಬೇಸರ ವ್ಯಕ್ತಪಡಿಸಿತ್ತು. ಈ ರೀತಿಯ ಮಾರ್ಗಸೂಚಿಗಳಿಂದಾಗಿ ಈಗಾಗಲೇ ಬಿಡುಗಡೆಯಾಗಿರುವ ಚಿತ್ರಗಳಿಗೆ ಬಹಳಷ್ಟು ತೊಂದರೆಯಾಗುತ್ತದೆ ಎಂದು ಹೇಳಿತ್ತು. ಮಾತ್ರವಲ್ಲದೆ ಸದ್ಯ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ ಅಭಿನಯಾದ ಬಹು ನೀರಿಕ್ಷಿತ ಚಿತ್ರ ಯುವರತ್ನ ಕೂಡ ಕಳೆದ ಶುಕ್ರವಾರ ಬಿಡುಗಡೆಗೊಂಡಿತ್ತು. ಮೊದಲ ದಿನವೇ ದಾಖಲೆಯ ಕಲೆಕ್ಷನ್ ಮಾಡಿದ ಯುವರತ್ನಗೆ ಬಳಿಕ ಬಂದ ಮಾರ್ಗಸೂಚಿ ಭಾರೀ ತೊಂದರೆಯನ್ನುಂಟು ಮಾಡಿತ್ತು. ಮಾತ್ರವಲ್ಲದೆ ಈ ಬಗ್ಗೆ ಪವರ್ ಸ್ಟಾರ್ ಹಾಗೂ ಅವರ ಅಭಿಮಾನಿಗಳು ಬೇಸರವನ್ನು ಹೊರಹಾಕಿದರು.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಸ್ವತಃ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಈ ಬಗ್ಗೆ ಚರ್ಚಿಸಿ ನಿಯಮವನ್ನು ಸಡಿಲಗೊಳಿಸುವಂತೆ ಕೇಳಿಕೊಂಡರು ಬಳಿಕ ಈ ಮಾರ್ಗ ಸೂಚಿಯಲ್ಲಿ ತುಸು ಬದಲಾವಣೆ ಮಾಡಿದ ರಾಜ್ಯ ಸರ್ಕಾರ ಏಪ್ರಿಲ್ 7ರ ತನಕ 100 ಶೇ ದಷ್ಟು ಚಿತ್ರಮಂದಿರ ಭರ್ತಿಗೆ ಅವಕಾಶ ನೀಡಿ ಆದೇಶ ಹೊರಡಿಸಿದರು. ಈ ನಡೆಗೆ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳು ಹಾಗೂ ಚಿತ್ರ ಪ್ರೇಮಿಗಳು ಸಿಎಂ ಯಡಿಯೂರಪ್ಪ ನಿಜವಾದ ರಾಜಹುಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ಜೈಕಾರ ಹಾಕಿದರು.
Comments
Post a Comment