ಸಿಎಂ ತವರು ಜೆಲ್ಲೆ ಶಿವಮೊಗ್ಗದಿಂದ ಕಾಂಗ್ರೆಸ್ ಗೆ ಭರ್ಜರಿ ಗುಡ್ ನ್ಯೂಸ್.? ಜೆಡಿಎಸ್ ಗೆ ತಲೆನೋವು.!

ರಾಜಕೀಯವೆಂದರೆ ಹಾಗೇ ಯಾರಿಗೆ ಯಾವ ಸಂಧರ್ಭದಲ್ಲಿ ಶುಭಸುದ್ದಿ ದೊರೆಯಲಿದೆ ಎಂದು ಹೇಳುವುದು ಅಷ್ಟು ಸುಲಭವಲ್ಲ. ಅದೇ ರೀತಿ ಯವ ಪಕ್ಷಕ್ಕೆ ಯಾವ ಪಕ್ಷಕ್ಕೆ ಯಾವ ಸಂಧರ್ಭದಲ್ಲಿ ಕಹಿಸುದ್ದಿ ದೊರಕಬಹುದು ಎಂದು ಹೇಳುವುದು ಕಷ್ಟ ಸಾಧ್ಯ. ಸದ್ಯ ಕರ್ನಾಟಕದ ರಾಜಕೀಯ ಪರಿಸ್ಥಿತಿಯು ಅದೇ ರೀತಿಯಾಗಿದೆ. ಮೂರು ಪ್ರಮುಖ ಪಕ್ಷಗಳಿಗೂ ಕಹಿ ಹಾಗೂ ಸಿಹಿ ಮಿಶ್ರಿತ ಸುದ್ದಿಗಳು ದೊರಕುತ್ತಿವೆ. ಸದ್ಯ ಸಿಎಂ ಯಡಿಯೂರಪ್ಪ ತವರು ಜೆಲ್ಲೆ ಶಿವಮೊಗ್ಗದಿಂದ ಕಾಂಗ್ರೆಸ್ ಪಕ್ಷಕ್ಕೆ ಸಿಹಿ ಸುದ್ದಿಯೊಂದು ದೊರೆತರೆ ಅದೇ ಜೆಲ್ಲೆಯಿಂದ ಜೆಡಿಎಸ್ ಪಕ್ಷಕ್ಕೆ ಕಹಿಸುದ್ದಿ ದೊರಕುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ.

ಹೌದು, ಕಳೆದ ಕೆಲ ಸಮಯದ ಹಿಂದೆ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಪುತ್ರ ಮಧು ಬಂಗಾರಪ ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಸೇರಿರುವ ಸುದ್ದಿ ನಿಮಗೆಲ್ಲ ತಿಳಿದಿದೆ. ಈ ಸುದ್ದಿ ಜೆಡಿಎಸ್ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು ಮಾತ್ರವಲ್ಲದೆ ಮುಖ್ಯಮಂತ್ರಿಗಳ ತವರು ಕ್ಷೇತ್ರದಲ್ಲಿ ಜೆಡಿಎಸ್ ಗೆ ಇದ್ದ ಅಲ್ಪ ಬಲವೂ ಕುಸಿದಂತಾಗಿತ್ತು ಸದ್ಯ ಅದೇ ರೀತಿಯ ಮತ್ತೊಂದು ಕಹಿಸುದ್ದಿ ಜೆಡಿಎಸ್ ಗೆ ದೊರೆಯುವ ಎಲ್ಲಾ ಲಕ್ಷಣಗಳು ಸದ್ಯ ಗೋಚರಿಸುತ್ತಿವೆ. ಈ ಮೂಲಕ ಜೆಡಿಎಸ್ ತನ್ನ ಶಕ್ತಿಯನ್ನು ಶಿವಮೊಗ್ಗದಲ್ಲಿ ಕಳೆದುಕೊಳ್ಳುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಮಧು ಬಂಗಾರಪ್ಪ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಕೆಲವೇ ದಿನಗಳ ಅಂತರದಲ್ಲಿ ಜೆಡಿಎಸ್ ಪಕ್ಷದಲ್ಲಿದ್ದ ಮಧು ಬಂಗಾರಪ್ಪ ಬೆಂಬಲಿಗರು ಬಿಜೆಪಿ ಸೇರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಇದು ಮಾತ್ರವಲ್ಲ ಶಿವಮೊಗ್ಗ ಜೆಲ್ಲೆಯ ಜೆಡಿಎಸ್ ನ ಜಿಲ್ಲಾಧ್ಯಕ್ಷ ಹಾಗೂ ಪ್ರಭಾವಿ ನಾಯಕ ಮಂಜುನಾಥ್ ಗೌಡ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ಕಾಂಗ್ರೆಸ್ ಗೆ ಭರ್ಜರಿ ಸಿಹಿಸುದ್ದಿಯಾಗಿದೆ.

Comments