ವಿರೋಧಿಗಳಿಗೆ ಖಡಕ್ ತಿರುಗೇಟು ಕೊಟ್ಟ ಮರಿ ರಾಜಾಹುಲಿ ಬಿ ವೈ ವಿಜಯೇಂದ್ರ.? ಆಷ್ಟಕ್ಕೂ ವಿಜಯೇಂದ್ರ ಟಾಂಗ್ ಕೊಟ್ಟಿದ್ದು ಯಾರಿಗೆ

ಕರ್ನಾಟಕ ರಾಜ್ಯದಲ್ಲಿ ಮಿಂಚಿನ ರಾಜಕೀಯ ಸಂಚಲನಗಳು ಪ್ರತಿದಿನವೂ ನಡೆಯುತ್ತಿದೆ. ಯಾವ ಸಂಧರ್ಭದಲ್ಲಿ ಎಂತಹ ತಿರುವು ಪಡೆಯಲಿದೆ ಎಂದು ಹೇಳುವುದು ಕಷ್ಟ ಸಾಧ್ಯ. ಯತ್ನಾಳ್ ಅವರ ಬಹಿರಂಗ ಟೀಕೆ, ಈಶ್ವರಪ್ಪನವರ ರಾಜ್ಯಪಾಲರಿಗೆ ದೂರು, ರಮೇಶ್ ಜಾರಕಿಹೋಳಿ ಅವರ ಸಿಡಿ ಸುದ್ದಿ ಈ ಎಲ್ಲಾ ಘಟನೆಗಳು ಬಿಜೆಪಿಗೆ ಮುಜುಗರ ತರಿಸುವಂತೆ ಮಾಡಿದೆ. ಈ ಎಲ್ಲಾದರ ಪ್ರಭಾವ ಉಪಚುನಾವಣೆಯ ಮೇಲಾಗಬಹುದು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಈ ಎಲ್ಲಾ ಬೆಳವಣಿಗೆಗಳು ಭಾರೀ ಸಂಚಲನಕ್ಕೆ ಕಾರಣವಾಗುತ್ತಿದೆ.

ಬಿಜೆಪಿಯ ನಾಯಕರು ಸದ್ಯ ಉಪಚುನಾವಣೆಯ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ರಾಜ್ಯ ಬಿಜೆಪಿಯ ಉಪಾಧ್ಯಕ್ಷ ಹಾಗೂ ಸಿಎಂ ಯಡಿಯೂರಪ್ಪರ ಪುತ್ರ ಬಿ ವೈ ವಿಜಯೇಂದ್ರ ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆಯಲ್ಲಿ ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿರುವ ವಿಜಯೇಂದ್ರ, ಚುನಾವಣಾ ಉಸ್ತುವಾರಿಯನ್ನು ನೀಡುವ ಜವಾಬ್ದಾರಿ ರಾಜ್ಯಧ್ಯಕ್ಷರಿಗಿರುವುದು, ಯಾರಿಗೆ ಸಾಮಾರ್ಥ್ಯವಿದೆಯೋ ಅವರಿಗೆ ಮಾತ್ರ ಉಸ್ತುವಾರಿಯನ್ನು ನೀಡುತ್ತಾರೆ ಎಂದು ಹೇಳಿದರು. ಈಶ್ವರಪ್ಪನವರ ದೂರಿನ ಬಗ್ಗೆ ಪ್ರತಿಕ್ರಿಯಿಸಿದ ವಿಜಯೇಂದ್ರ ಎಸ್.ಎಂ ಕೃಷ್ಣ ಹಾಗೂ ದೇವೆಗೌಡ ಸರ್ಕಾರದಲ್ಲಿಯೂ ಇಂತಹ ಘಟನೆ ನಡೆದಿದೆ ಎಂದು ಹೇಳಿದರು,ಇದನ್ನು ನಾಲ್ಕು ಗೋಡೆಗಳ ಮಧ್ಯೆ ಕೂತು ಬಗೆಹರಿಸಲಾಗುವುದು ಎಂದು ಮಾತನಾಡಿದರು.

ಬಿ ವೈ ವಿಜಯೇಂದ್ರ ಇದೇ ಸಂಧರ್ಭದಲ್ಲಿ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು. ಈ ಬಾರಿಯೂ ಕಾಂಗ್ರೆಸ್ ಸೋಲಲಿದೆ. ಎರಡನೇ ಸುತ್ತಿನ ಬಳಿಕ ಕಾಂಗ್ರೆಸ್ ಪಕ್ಷದವರು ಮತ ಎಣಿಕೆ ಕೇಂದ್ರದಿಂದ ಮನೆಗೆ ತೆರಳುತ್ತಾರೆ ಎಂದು ಹೇಳಿದರು. ಯಡಿಯೂರಪ್ಪರಂತೆ ಚಾಣಕ್ಯರಾಗಿರುವ ವಿಜಯೇಂದ್ರ ಕಳೆದ ಉಪಚುನಾವಣೆಯಲ್ಲಿ ಉಸ್ತುವಾರಿಯನ್ನು ತೆಗೆದುಕೊಳ್ಳುವ ಮೂಲಕ ಬಿಜೆಪಿ ಗೆಲುವುಗೆ ಕಾರಣರಾಗಿದ್ದಾರೂ.

Comments