ಚುನಾವಣೆಗೂ ಮೊದಲೇ ಬಸವಕಲ್ಯಾಣದಲ್ಲಿ ಬಿಜೆಪಿಗೆ ಭರ್ಜರಿ ಗುಡ್ ನ್ಯೂಸ್.! ವಿರೋಧಿಗಳಿಗೆ ನಡುಕ ಹುಟ್ಟಿಸಿದ ಚುನಾವಣಾ ಪ್ರಚಾರ

ರಾಜ್ಯದಲ್ಲಿ ಉಪಚುನಾವಣೆಯ ಕ-ದ-ನ ಜೋರಾಗುತ್ತಿದೆ. ಈ ನಡುವೆ ಚುನಾವಣಾ ಪ್ರಚಾರ ಸಭೆಗಳು, ರ್ಯಾಲಿಗಳು ಹಾಗೂ ಸಭೆಗಳು ನಡೆಯುತ್ತಿವೆ. ಈ ನಡುವೆ ಒಂದು ಪಕ್ಷದ ಕಾರ್ಯಕರ್ತರ ಮತ್ತೊಂದು ಪಕ್ಷಕ್ಕೆ ಸೇರ್ಪಡೆಯಾಗುವುದು ಚುನಾವಣಾ ಸಂಧರ್ಭದಲ್ಲಿ ಸಾಮಾನ್ಯವಾಗಿದೆ. ಈ ನಡುವೆ ಬಸವಕಲ್ಯಾಣದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ತಟ್ಟುವುದರ ಜೊತೆಗೆ ಬಿಜೆಪಿ ಸೋಲಲಿದೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಸಾಮಾನ್ಯವಾದ ಮಾತುಗಳಾಗಿದ್ದವು ಅದರೆ ಸದ್ಯದ ಬೆಳವಣಿಗೆ ನೋಡಿದರೆ ಬಿಜೆಪಿಗೆ ಈ ಎಲ್ಲಾ ಬೆಳವಣಿಗೆಗಳು ವರದಾನವಾಗಿ ಪರಿಣಮಿಸಲಿದೆ.

ಬಸವಕಲ್ಯಾಣದಲ್ಲಿ ಸ್ವಲ್ಪ ಮಟ್ಟಿನ ಬಂಡಾಯವಿದ್ದದ್ದು ನಿಜ ಅದರೆ ಅದು ಯಾವುದು ಸದ್ಯ ಇಲ್ಲ. ಬಿಜೆಪಿಯ ಗೆಲುವಿಗಾಗಿ ಎಲ್ಲಾರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಬಸವಕಲ್ಯಾಣದಲ್ಲಿ ಬಿಜೆಪಿ ಆಭ್ಯ್ಯರ್ಥಿಯನ್ನು ಮನೆಯ ಸೇವೆಕನಂತೆ ಜನ ಬೆಂಬಲಿಸುತ್ತಿದ್ದಾರೆ ಎಂದು ಬಸವಕಲ್ಯಾಣದ ಬಿಜೆಪಿ ಆಭ್ಯರ್ಥಿ ಶರಣು ಸಲಾಗರ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಬಸವಕಲ್ಯಾಣದಲ್ಲಿ ಪ್ರಚಾರ ಸಭೆಗೆ ನಳೀನ್ ಕುಮಾರ್ ಕಟೀಲ್ ಹಾಗೂ ಪಕ್ಷದ ಹಿರಿಯರು ಆಗಮಿಸುತ್ತಾರೆ ಈ ಸಂಧರ್ಭದಲ್ಲಿ ಬಿಜೆಪಿಗೆ ಹಲವಾರು ಯುವ ನಾಯಕರು ಸೇರ್ಪಡೆಗೊಳ್ಳಲಿದ್ದಾರೆ ಇದು ಬಿಜೆಪಿಗೆ ಲಾಭವಾಗಲಿದೆ ಎಂದು ಹೇಳಿದರು. ಮಾತ್ರವಲ್ಲದೆ ಬಿಜೆಪಿಯಲ್ಲಿ ಕಾಣಿಸಿಕೊಂಡಿದ್ದ ಅಸಮಾಧಾನ ಶಮನವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಒಟ್ಟರೆಯಾಗಿ ಬಿಜೆಪಿಯ ಎಲ್ಲಾ ಬಂಡಾಯಗಳು ಚುನಾವಣೆಗೂ ಮೊದಲೇ ಶಮನವಾಗುವ ಮೂಲಕ ಗುಡ್ ನ್ಯೂಸ್ ದೊರೆಯಲಿದೆ.

Comments