ಬಿಜೆಪಿಗೆ ದಾಖಲೆಯ ಭರ್ಜರಿ ಗೆಲುವು, ಜೆಡಿಎಸ್ ಗೆ ಅಲ್ಪ ಮುನ್ನಡೆ.! ಮತ್ತೊಮ್ಮೆ ಪಾತಳಕ್ಕೆ ಕುಸಿದ ಕಾಂಗ್ರೆಸ್ ಗೆ ಭಾರೀ ಮುಖಭಂಗ

ಚುನಾವಣೆ ಎಂದರೆ ಅದೇ ಯಾವ ಪಕ್ಷ ಯಾವಾಗ ಗೆಲ್ಲಲಿದೆ ಎಂದು ಹೇಳುವುದು ಕಷ್ಟ. ಚುನಾವಣೆಗಳಲ್ಲಿ ಸೋಲು ಗೆಲುವು ಸಹಜ. ಹೆಚ್ಚು ಮತಗಳನ್ನು ಪಡೆದ ಪಕ್ಷ ವಿಜಶಾಲಿಯಾದರೆ ಕಡಿಮೆ ಮತ ಪಡೆದ ಪಕ್ಷ ಸೋಲಿನ ಸುಳಿಗೆ ಸಿಲುಕುತ್ತದೆ. ಈ ಮೂಲಕ ಸದ್ಯ ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಮತ್ತೊಂದು ದಾಖಲೆಯನ್ನು ಬರೆದಿದೆ.

ಸರಗೂರು ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ  ಆರಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಭರ್ಜರಿ ಜಯ ಸಾಧಿಸಿದೆ. ಸುಮಾರು ೧೨ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಆರಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರದ ಗದ್ದುಗೆಯನ್ನು ಏರಿದೆ. ಇದೇ ಚುನಾವಣೆಯಲ್ಲಿ ಜೆಡಿಎಸ್ ಮೂರು ಸ್ಥಾನಗಳನ್ನು ಗೆಲ್ಲುವ ಮೂಲಕ ಅಲ್ಪ ತೃಪ್ತಿಯನ್ನು ಪಡೆಯಿತು.

ಹೊಸಬರಿಗೆ ಮಣೆ ಹಾಕುವ ಮೂಲಕ ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದ ಬಿಜೆಪಿ ಇದರಲ್ಲಿ ಭರ್ಜರಿ ಗೆಲ್ಲುವ ಮೂಲಕ ಮತ್ತೊಮ್ಮೆ ತಮ್ಮ ಸಾಧನೆಯನ್ನು ತೋರಿಸಿದೆ.

Comments