ಲಿಂಗಾಯಿತ ಸಮುದಾಯದ ಪ್ರಬಲ ನಾಯಕರಾಗಿರುವ ಯಡಿಯೂರಪ್ಪ ರಾಜಕೀಯದಲ್ಲಿ ಹಲವಾರು ಏಳು-ಬೀಳುಗಳನ್ನು ಕಂಡವರು. ಇಂದು ಯಡಿಯೂರಪ್ಪ ಗುಡುಗಿದರೆ ವಿರೋಧಿಗಳು ಬೆಚ್ಚಿಬೀಳುತ್ತಾರೆ. ಯಡಿಯೂರಪ್ಪ ವರ್ಚಸ್ಸು ಇಂದಿಗೂ ಕೂಡ ಕಡಿಮೆಯಾಗಿಲ್ಲ. ರಾಜ್ಯದಲ್ಲಿ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ ಕೀರ್ತಿ ರಾಜಾಹುಲಿಗೆ ಸಲ್ಲುತ್ತದೆ. ಅದರೆ ಪ್ರಸ್ತುತ ದಿನಮಾನಗಳಲ್ಲಿ ರಾಜಕೀಯ ಲಾಭಕ್ಕಾಗಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ದ ಆರೋಪಗಳನ್ನು ಮಾಡುತ್ತಿದ್ದಾರೆ.
ಬಿಜೆಪಿಯ ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್ ಈಗಾಗಲೇ ಬಹಿರಂಗ ಹೇಳಿಕೆ ನೀಡಿ ಯಡಿಯೂರಪ್ಪರಿಗೆ ಮುಜುಗರವನ್ನುಂಟು ಮಾಡಿದರೆ, ತನ್ನದೇ ಸಚಿವ ಸಂಪುಟದ ಸದಸ್ಯ ಹಿರಿಯ ರಾಜಕಾರಣಿ ಕೆ.ಎಸ್ ಈಶ್ವರಪ್ಪ ಅವರು ಯಡಿಯೂರಪ್ಪ ವಿರುದ್ದ ರಾಜ್ಯಪಾಲರು ಹಾಗೂ ಬಿಜೆಪಿ ಹೈಕಮಾಂಡ್ ಗೆ ಪತ್ರ ಬರೆದಿದ್ದಾರೆ ಮಾತ್ರವಲ್ಲದೆ ಇದು ರಾಜಕೀಯ ವಲಯದಲ್ಲೂ ಭಾರೀ ಸಂಚಲನ ಸೃಷ್ಟಿಸಿತ್ತು. ಮಾತ್ರವಲ್ಲದೆ ವಿರೋಧ ಪಕ್ಷಗಳು ಇದರ ಲಾಭವನ್ನು ಪಡೆದುಕೊಂಡಿದ್ದವು. ಸದ್ಯ ಈ ಎಲ್ಲಾ ಬೆಳವಣಿಗೆಗಳ ನಡುವೆ ರಾಜಹುಲಿ ಯಡಿಯೂರಪ್ಪ ಅವರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಸಚಿವ ಸಂಪುಟದ ಸದಸ್ಯರು ಹಾಗೂ ಬಿಜೆಪಿ ಶಾಸಕರು ಈಶ್ವರಪ್ಪ ಅವರ ನಡೆಯನ್ನು ವಿರೋಧಿಸಿದ್ದು, ಇದು ತಪ್ಪು ಎಂದು ಹೇಳುವ ಮೂಲಕ ಈಶ್ವರಪ್ಪ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
Comments
Post a Comment