ಕರ್ನಾಟಕದ ರಾ-ಜ-ಕೀ-ಯದ ಇತಿಹಾಸದಲ್ಲಿ ಈ ಬಾರಿಯ ಆಷಾಡ ಭಾರೀ ಮಹತ್ವದ್ದಾಗಿದೆ. ದಶಕಗಳ ಕಾಲ ರಾಜ್ಯ ಬಿ-ಜೆ-ಪಿಯನ್ನು ಕಟ್ಟಿ ಬೆಳೆಸಿ ಮುಖ್ಯಮಂತ್ರಿಯಾಗಿ ಹಾಗೂ ಇನ್ನೂ ಆನೇಕ ಮಹತ್ವದ ಸ್ಥಾನಗಳನ್ನು ಆಲಂಕರಿಸಿ ದಕ್ಷಿಣ ಭಾರತದಲ್ಲಿ ಬಿ-ಜೆ=ಪಿಯನ್ನು ಕಟ್ಟಿ ಬೆಳೆಸಿದ ಕೀರ್ತಿ ಯಡಿಯೂರಪ್ಪರಿಗೆ ಸಲ್ಲುತ್ತದೆ. ಸದ್ಯ ಯಡಿಯೂರಪ್ಪರ ಒಂದು ಯುಗ ಆಂತ್ಯವಾಯಿತು ಎಂದು ಹೇಳಿದರೆ ತಪ್ಪಗಲಾರದು.
ಕರ್ನಾಟಕ ಹಾಗೂ ದಕ್ಷಿಣ ಭಾರತದಲ್ಲಿ ರಾಷ್ಟ್ರೀಯ ಪ-ಕ್ಷ-ಗಳಿಗೆ ಹೆಚ್ಚಾಗಿ ಮಾನ್ಯತೆ ಇಲ್ಲದಿರುವುದು ನಿಮಗೆಲ್ಲ ತಿಳಿದಿರುವ ಸತ್ಯ. ಅದರೆ ಇಂತಹ ಕಠಿಣ ಪರಿಸ್ಥಿತಿಯಲ್ಲಿ ಯಡಿಯೂರಪ್ಪನವರು ಸೈಕಲ್ ಮೂಲಕ ಪ-ಕ್ಷ-ಕ್ಕಾಗಿ ಹೋರಾಡಿ, ಪ-ಕ್ಷದ ಸಂಘಟನೆಯನ್ನು ನಡೆಸಿದರು. ಯಡಿಯೂರಪ್ಪನವರ ಈ ಅವಿರತ ಪ್ರಯತ್ನದಿಂದಾಗಿ ಇಂದು ದಕ್ಷಿಣ ಭಾರತದಲ್ಲಿ ಬಿ-ಜೆ-ಪಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ.
ಭಾರತೀ-ಯ ಜನ-ತಾ ಪ-ಕ್ಷ ಇಂದು ಬಹಳಷ್ಟು ಯಶಸ್ಸನ್ನು ಕಂಡಿದೆ. ಇಂದು ಹಿರಿ ತಲೆಗಳಿಗೆ ಹೆಚ್ಚು ಮಹತ್ವವನ್ನು ನೀಡುತ್ತಿಲ್ಲ ಎಂಬುದು ಎಲ್ಲಾರಿಗೂ ತಿಳಿದಿರುವ ಸತ್ಯ. ಸುಮಾರು 75 ವರ್ಷ ದಾಟಿದ ವ್ಯಕ್ತಿಗಳಿಗೆ ಯಾವುದೇ ಮಹತ್ವದ ಹುದ್ದೆಯನ್ನು ನೀಡಬಾರದು ಎಂಬ ಅಲಿಖಿತ ನಿಯಮ ಕೂಡ ಇದೆ.
ಈ ಕಾರಣದಿಂದಾಗಿಯೇ ದಕ್ಷಿಣ ಭಾರತದ ಯಶಸ್ವಿ ನಾಯಕ ಯಡಿಯೂರಪ್ಪರಿಗೆ ಮುಖ್ಯಮಂತ್ರಿ ಸ್ಥಾನದಿಂದ ಗೇಟ್ ಪಾಸ್ ನೀಡಲಾಗಿದೆ. ಈ ಎಲ್ಲಾದರ ನಡುವೆ ಬಿ.ಎಸ್.ವೈ ಆಪ್ತ ಬಸವರಾಜ್ ಬೊಮ್ಮಾಯಿಯವರಿಗೆ ನೂತನ ಮುಖ್ಯಮಂತ್ರಿಯಾಗಿ ನೇಮಕ ಮಾಡಲಾಗಿದೆ. ಈಗ ಸಂಪುಟ ರಚನೆಯ ಕಸರತ್ತು ನಡೆಸಲಾಗುತ್ತಿದೆ. ಈ ನಡುವೆ ನೂತನ ಸಂಪುಟಕ್ಕೆ ಸೇರ್ಪಡೆಯಾಗಲಿರು ಶಾಸಕರ ಸಂಭಾವ್ಯ ಪಟ್ಟಿ ಇಲ್ಲಿದೆ ನೋಡಿ.
ನೂತನ ಸಚಿವ ಸಂಪುಟದಲ್ಲಿ ಮೂರು ಜನ ಉಪಮುಖ್ಯಮಂತ್ರಿಗಳಿರುತ್ತಾರೆ ಎಂಬ ಮಾತುಗಳು ದಟ್ಟವಾಗಿದೆ. ಶ್ರೀ ರಾಮಲು ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಬಹುತೇಕ ಫಿಕ್ಸ್ ಆಗಿದೆ. ಇನ್ನೂ ಉಳಿದಂತೆ ಉದ್ಯಮಿ ನಿರಾಣಿ, ಶಾಸಕ ರಾಜು ಗೌಡ, ಬಾಲಚಂದ್ರ ಜಾರಕಿಹೊಳಿ, ಸುನೀಲ್ ಕುಮಾರ್, ಅಂಗಾರ, ರಾಮದಾಸ್ ಹಾಗೂ ಎಂ.ಟಿ.ಬಿ ನಾಗರಾಜ್ ಹಾಗೂ ಸುಧಕಾರ್ ಅವರಿಗೆ ಬಹುತೇಕ ಸ್ಥಾನ ಫಿಕ್ಸ್ ಎಂದು ಹೇಳಲಾಗಿದೆ.
Comments
Post a Comment