ಬಿಜೆಪಿ ಕಾರ್ಯಕರ್ತರೊಬ್ಬರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಗಾಗಿ ದೇವಾಲಯವನ್ನು ನಿರ್ಮಿಸಿದ್ದಾರೆ. 37 ವರ್ಷದ ಮಯೂರ್ ಮುಂಡೆ ಎಂಬುವವರು ಪ್ರಧಾನಿ ಮೋದಿಗಾಗಿ ದೇವಾಲಯ ನಿರ್ಮಿಸಿದ್ದು, ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸಿದ' ಪ್ರಧಾನಿಗೆ ಸಲ್ಲಿಸುವ ಗೌರವಕ್ಕಾಗಿ ಈ ದೇವಾಲಯ ನಿರ್ಮಿಸಿದೆ. ಎಂದು ಮಯೂರ್ ಮಂಡೆ ಹೇಳಿದ್ದಾರೆ. ಪುಣೆಯ ಔಂಧ್ ಪ್ರದೇಶದಲ್ಲಿ ಮಯೂರ್ ದೇವಾಲಯ ನಿರ್ಮಿಸಿದ್ದಾರೆ.
'ಪ್ರಧಾನಿಯಾದ ನಂತರ, ಮೋದಿ ಅವರು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಅನುಚ್ಛೇದ 370 ರದ್ದತಿ, ರಾಮ ಮಂದಿರ ದೇವಾಲಯ ಮತ್ತು ತ್ರಿವಳಿ ತಲಾಖ್ ನಂತಹ ಸಮಸ್ಯೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ' ಎಂದು ರಿಯಲ್ ಎಸ್ಟೇಟ್ ಏಜೆಂಟ್ ಆಗಿರುವ ಮುಂಡೆ ಹೇಳಿದ್ದಾರೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಿದ ವ್ಯಕ್ತಿಗೆ ದೇವಾಲಯ ಇರಬೇಕು ಎಂದು ನಾನು ಭಾವಿಸಿದ್ದೆ, ಆದ್ದರಿಂದ ನಾನು ಈ ದೇವಾಲಯವನ್ನು ನನ್ನ ಸ್ವಂತ ಆವರಣದಲ್ಲಿ ನಿರ್ಮಿಸಲು ನಿರ್ಧರಿಸಿದೆ' ಎಂದು ಹೇಳಿದ್ದಾರೆ. ದೇವಾಲಯಕ್ಕಾಗಿ ಕೆಂಪು ಅಮೃತಶಿಲೆಯನ್ನು ಜೈಪುರದಿಂದ ತರಲಾಗಿದ್ದು, ಒಟ್ಟು ವೆಚ್ಚ ಸುಮಾರು ೧.೬ ಲಕ್ಷ ರೂ. ತಗುಲಿದೆ ಎಂದು ಅವರು ಹೇಳಿದ್ದಾರೆ.
Comments
Post a Comment