ಭಾರತದ ಮೂರು ಸೇ-ನೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತಮಿಳುನಾಡಿನ ಕಾಡಿನಲ್ಲಿ ದುರಂತಕ್ಕಿಡಾಗಿತ್ತು. ದುರಂತದ ಬಳಿಕ ಹಲವಾರು ಪ್ರಶ್ನೆಗಳಿಗೆ ಕಾರಣವಾಗಿತ್ತು. ಸದ್ಯ ಈ ಎಲ್ಲಾ ಅನುಮಾನಗಳಿಗೆ ಸದ್ಯ ಉತ್ತರ ದೊರಕುವ ಲಕ್ಷಣ ಗೋಚರಿಸುತ್ತಿದೆ. ಇದರ ತನಿಖೆಯನ್ನು ಕೈಗೆತ್ತಿಕೊಂಡಿದ್ದ ತನಿಖಾ ತಂಡ ಅಂತಿಮ ಹಂತದ ವರದಿಯನ್ನು ಸಲ್ಲಿಸಲು ತನಿಖಾ ತಂಡ ಮುಂದಾಗಿದೆ.
ತನಿಖಾ ವರದಿಯ ಕುರಿತು ಸರ್ಕಾರ ಯಾವುದೇ ಅಧಿಕೃತ ಮಾಹಿತಿ ನೀಡದಿದ್ದರು, ಮೇಲ್ನೊಟ್ಟಕ್ಕೆ ಇದು ಹವಾಮಾನ ವೈಪರಿತ್ಯದಿಂದ ಈ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ. ಪೈಲೆಟ್ ಅಥವಾ ಹೆಲಿಕಾಪ್ಟರ್ ನಲ್ಲಿ ಯಾವುದೇ ದೋಷವಿರಲಿಲ್ಲ ಬದಲಾಗಿ ಕೆಟ್ಟ ಹವಾಮಾನದಿಂದಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.
ಹೆಲಿಕಾಪ್ಟರ್ ನಲ್ಲಿ ಯಾವುದೇ ಉದ್ದೇಶಪೂರಿತ ಹಾರಟ ನಡೆಸಲಾಗಿಲ್ಲ ಎಂದು ಹೇಳಲಾಗಿದೆ. ಈ ಘಟನೆಯಲ್ಲಿ ಸುಮಾರು ೧೪ ಜನ ಪ್ರಯಾಣಿಸಿದ್ದು ಅದೇ ದಿನ ೧೩ ಜನ ಸಾವನಪ್ಪಿದ್ದರು ಬಳಿಕ ಪೈಲಟ್ ಸಾವನ್ನಪ್ಪಿದ್ದರು. ಒಟ್ಟಾರೆಯಾಗಿ ೨೦೨೧ರಲ್ಲಿ ನಡೆದ ಕೆಟ್ಟ ಘಟನೆಗಳಲ್ಲಿ ಇದು ಒಂದು.
Comments
Post a Comment