ರಾಜಾಹುಲಿ, ಕರ್ನಾಟಕದ ಕಿಂಗ್ ಯಡಿಯೂರಪ್ಪನವರಿಗೆ ಕೇಂದ್ರೀಯ ಮಟ್ಟದಲ್ಲಿ ಪ್ರಭಾವಿ ಹುದ್ದೆ ನೀಡಿದ ಬಿಜೆಪಿ ಹೈಕಮಾಂಡ್

ಕರ್ನಾಟಕ ರಾಜ್ಯದ ಮಾಸ್ ಲೀಡರ್ ಬಿ.ಎಸ್ ಯಡಿಯೂರಪ್ಪನವರ ಕಾಲ ಮುಗಿಯಿತು, ಬಿ.ಎಸ್.ವೈ ಅವರನ್ನು ರಾಜಕೀಯದಿಂದ ಮೂಲೆ ಗಂಪು ಮಾಡಲಾಗಿದೆ ಎಂಬ ಮಾತುಗಳು ಕರ್ನಾಟಕ ರಾಜಕೀಯ ವಲಯದಲ್ಲಿ ಕೇಳಿ ಬಂದಿತು ಸದ್ಯ ಈ ಎಲ್ಲಾ ಮಾತುಗಳು ಸತ್ಯಕ್ಕೆ ದೂರ ಎನ್ನುವಂತೆ ಬಿಜೆಪಿ ಕೇಂದ್ರ ಹೈಕಮಾಂಡ್ ಮಹತ್ವದ ಜವಾಬ್ದಾರಿಯನ್ನು ನೀಡಿದೆ. 

ಕರ್ನಾಟಕದಲ್ಲಿ ಯಡಿಯೂರಪ್ಪನವರನ್ನು ಬಿಟ್ಟು ಚುನಾವಣೆ ಎದುರಿಸುವುದು ಬಹಳ ಕಷ್ಟ ಎಂಬುದು ಈಗಾಗಲೇ ಬಿಜೆಪಿಯ ಕೇಂದ್ರ ಮಟ್ಟಕ್ಕೆ ಈಗಾಗಲೇ ಮನವರಿಯಾಗಿದೆ, ಮುಂದಿನ ವಿಧಾನಸಭೆ ಚುನಾವಣೆ ಹಾಗೂ ಲೋಕಸಭಾ ಚುನಾವಣಾ ದೃಷ್ಟಿಯಿಂದ ಯಡಿಯೂರಪ್ಪನವರನ್ನು ಮುಂಡಿಟ್ಟು ಚುನಾವಣೆ ಎದುರಿಸುವುದು ಅನಿವಾರ್ಯವಾಗಿದೆ ಎಂದು ಆರಿತು, ಬಿ.ಎಸ್.ವೈ ಅವರಿಗೆ ಮಹತ್ವದ ಜವಾಬ್ದಾರಿಯನ್ನು ನೀಡಲಾಗಿದೆ.

Comments