ಬಿಜೆಪಿ ಅಧಿಕಾರಕ್ಕೆ ಬರಲು ಪ್ರಮುಖ ಕಾರಣ ಬಾಂಬೆ ಟೀಮ್ ಎಂಬುದು ಎಲ್ಲಾರಿಗೂ ತಿಳಿದಿರುವ ಸತ್ಯ. ಅಧಿಕಾರದ ಆಸೆಗೆ ಬಿದ್ದು ತಮ್ಮನ್ನು ಗೆಲ್ಲಿಸಿದ ಪಕ್ಷವನ್ನು ಬಿಟ್ಟು ಬೇರೆ ಪಕ್ಷ ಸೇರಿದ ಬಾಂಬೆ ಟೀಮ್ ನ ಸದಸ್ಯರಲ್ಲಿ ಆನೇಕರು ಸಚಿವ ಸ್ಥಾನದಂತಹ ದೊಡ್ಡ ಸ್ಥಾನದಲ್ಲಿದ್ದು ಅಧಿಕಾರವನ್ನು ಆನುಭವಿಸುತ್ತಿದ್ದಾರೆ ಅದರೆ ಅದರಲ್ಲೂ ಕೆಲವರಿಗೆ ಯಾವುದೇ ಸ್ಥಾನವಿಲ್ಲದೆ ಸುಮ್ಮನೆ ಕುಳಿತಿದ್ದಾರೆ ಸದ್ಯ ಬಾಂಬೆ ಟೀಮ್ ನ ಕೆಲ ಸದಸ್ಯರು ಬಿಜೆಪಿಗೆ ರೆಬೆಲ್ ಆಗುವ ಸಾಧ್ಯತೆ ಹೆಚ್ಚಾಗಿದೆ. ಬಾಂಬೆ ಟೀಮ್ ನ ಸದಸ್ಯರಲ್ಲಿ ಒಬ್ಬರು ಸದ್ಯ ಕಾಂಗ್ರೆಸ್ ಸೇರಲು ಸಜ್ಜಾಗಿದ್ದಾರೆ ಎಂಬ ಮಾತುಗಳು ಭಾರೀ ಜೋರಾಗಿ ಕೇಳಿ ಬರುತ್ತಿದೆ.
ಸಮ್ಮೀಶ್ರ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಹಳ್ಳಿ ಹಕ್ಕಿ ಆಗಾಗ ಸ್ವ ಪಕ್ಷದ ವಿರುದ್ದವೇ ಅಪಸ್ವರವನ್ನು ಬಾರಿಸುತ್ತಿರುವ ವಿಷಯ ಎಲ್ಲಾರಿಗೂ ತಿಳಿದಿದೆ. ಸದ್ಯ ಬಹಿರಂಗವಾಗಿಯೇ ತಾನು ಕಾಂಗ್ರೆಸ್ ಗೆ ಬೆಂಬಲಿಸಲು ಸಿದ್ದ ಎನ್ನುವ ಮೂಲಕ ಹಳ್ಳಿ ಹಕ್ಕಿ ಮತ್ತೇ ಗುಡಿಗೆ ಮರಳಲು ಸಜ್ಜಾಗಿದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಕರ್ನಾಟಕದ ರಾಜಕೀಯ ವಲಯ ಮುಂದಿನ ದಿನಗಳಲ್ಲಿ ಯಾವ ದಿಕ್ಕನ್ನೂ ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ. ಒಂದು ವೇಳೆ ಕಾಂಗ್ರೆಸ್ ಪಕ್ಷಕ್ಕೆ ವಿಶ್ವನಾಥ್ ಸೇರುವ ಇಚ್ಚೆ ವ್ಯಕ್ತಪಡಿಸಿದರೆ ಅವರನ್ನು ಪಕ್ಷ ಮತ್ತೇ ಸೇರಿಸಿಕೊಳ್ಳಲು ಸಿದ್ದವಿದೆಯ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.
Comments
Post a Comment