ಕರ್ನಾಟದಲ್ಲಿ ಯಾರಿಗೆ ಅಧಿಕಾರದ ಪಟ್ಟ, ಸಮೀಕ್ಷೆಯೊಂದರಿಂದ ಹೊರಬಿತ್ತು ಆಚ್ಚರಿಯ ಫಲಿತಾಂಶ.?

ಕರ್ನಾಟಕ ರಾಜ್ಯದಲ್ಲಿ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಈ ಮಧ್ಯೆ ಪಕ್ಷಗಳು ತಾ ಮುಂದು ನಾ ಮುಂದು ಎನ್ನುವ ರೀತಿಯಲ್ಲಿ ತಮ್ಮ ಪ್ರಣಾಳಿಕೆಗಳ ಪಟ್ಟಿಯನ್ನು ಮೌಖಿಕವಾಗಿ ಜನರ ಮುಂದಿಡುವ ಪ್ರಯತ್ನವನ್ನು ಮಾಡುತ್ತಿದೆ. ಈ ಮಧ್ಯೆ ಆಚ್ಚರಿಯ ಫಲಿತಾಂಶವೊಂದು ಸಮೀಕ್ಷೆಯೊಂದು ಹೊರಬಿದ್ದಿದೆ. ಕರ್ನಾಟಕದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಬಹುದು ಎಂಬ ಮಾಹಿತಿಯನ್ನು ಈ ಸಮೀಕ್ಷೆ ಮಾಹಿತಿ ನೀಡಿದೆ.

ಹೊರರಾಜ್ಯದ ಸಮೀಕ್ಷಾ ತಂಡವೊಂದು ನಡೆಸಿದ ಸಮೀಕ್ಷೆಯಲ್ಲಿ ಈ ಬಾರಿ ಕರ್ನಾಟಕದಲ್ಲಿ  ಕಾಂಗ್ರೆಸ್ ಪಕ್ಷ ಬಹುಮತ ಪಡೆದು ಅಧಿಕಾರದ ಗದ್ದುಗೆ ಏರಲಿದೆ ಎಂಬ ಮಾಹಿತಿ ಬಹಿರಂಗವಾಗಿದೆ. ಮತಗಳಿಕೆಯಲ್ಲೂ ಕಾಂಗ್ರೆಸ್ ಪಕ್ಷ ಹೆಚ್ಚಿನ ಪ್ರಮಾಣದ ಮತವನ್ನು ಪಡೆಯಲಿದೆ ಎಂದು ಇದರಲ್ಲಿ ತಿಳಿದು ಬಂದಿದೆ.

Comments