ಭಾರತದಲ್ಲಿ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ನೀವೂ ನನಗೆ ರ-ಕ್ತ ಕೊಡಿ; ನಾನು ನಿಮಗೆ ಸ್ವಾಂತ್ರ್ಯವನ್ನು ತಂಡು ಕೊಡುತ್ತೇನೆ ಎಂದು ಕರೆ ನೀಡಿದ್ದರು. ಭೋಸ್ ರ ಈ ಹೇಳಿಕೆ ಸ್ವಾತಂತ್ರ್ಯ ಹೋ-ರಾಟಗಾರರಲ್ಲಿ ಭಾರೀ ಧೈರ್ಯವನ್ನು ನೀಡಿತ್ತು ಸದ್ಯ ಅಂತಹದ್ದೇ ಮತ್ತೊಂದು ಹೇಳಿಕೆ ದೇಶವ್ಯಾಪಿ ಭಾರೀ ಚರ್ಚೆಯಾಗುತ್ತಿದೆ. ಕಳೆದ ಕೆಲದಿನಗಳಿಂದ ಸುದ್ದಿ ಮಾಧ್ಯಮಗಳಲ್ಲಿ ಚರ್ಚೆಯಲ್ಲಿರುವ ಬಾಗೇಶ್ವರ ಧಾಮದ ಮುಖ್ಯಸ್ಥ ಧೀರೇಂದ್ರ ಶಾಸ್ತ್ರಿ ಆಚ್ಚರಿಯ ಹೇಳಿಕೆಯಿಂದ ಭಾರೀ ಸುದ್ದಿಯಾಗುತ್ತಿದ್ದಾರೆ.
ಭೋಸ್ ಅವರು ಅಂದು ಸ್ವಾತಂತ್ರ್ಯಕ್ಕಾಗಿ ಕರೆ ಕೊಟ್ಟರು ಅದೇ ರೀತಿ ಇಂದು ನಾನು ಹಿ-ಂದೂ ರಾಷ್ಟ್ರ ನಿರ್ಮಾಣ ಮಾಡುವ ಸಲುವಾಗಿ ಒಂದು ಹೇಳಿಕೆಯನ್ನು ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ ಅಷ್ಟಕ್ಕೂ ಧೀರೇಂದ್ರ ಶಾಸ್ತ್ರಿ ಯಾರು.? ಅವರ ಆಚ್ಚರಿಯ ಪವಾಡಗಳೇನು.? ಭಾರತದ ಸಾಮಾಜಿಕ ಜಾಲತಾಣ, ಸುದ್ದಿ ಮಾಧ್ಯಮಗಳಲ್ಲಿ ಇವರು ಯಾಕೆ ಇಷ್ಟು ಸುದ್ದಿಯಲ್ಲಿದ್ದಾರೆ ಹಾಗೂ ಇವರ ವಿರುದ್ದ ಯಾಕೆ ಅಸಮಾಧಾನಗಳು ಕೇಳಿ ಬರುತ್ತಿದೆ ಎಂಬುದರ ಬಗ್ಗೆ ಮೊದಲು ತಿಳಿಯೋಣ.
ಧೀರೇಂದ್ರ ಶಾಸ್ತ್ರಿ ಮಧ್ಯಪ್ರದೇಶದಲ್ಲಿರುವ ಚಟ್ಟಪುರ್ ಜಿಲ್ಲೆಯ ಗಾಡಾ ಎಂಬ ಗ್ರಾಮದಲ್ಲಿರುವ ಭಾಗೆಶ್ವರ್ ಧಾಮದ ಮುಖ್ಯಸ್ಥ. ಇವರು ದೇವಮಾನವ ಎಂದು ಅಲ್ಲಿನ ಜನರ ನಂಬಿಕೆ. ರಾಮನ ಭಂಟ ಹನುಮಂತನ ಆರಾಧಕರಾಗಿರುವ ಶಾಸ್ತ್ರಿ ತಮ್ಮ ಹಲವಾರು ಪವಾಡಗಳಿಂದ ಚಿರಪರಿಚಿತರು.
ಧೀರೇಂದ್ರ ಶಾಸ್ತ್ರಿಯವರು ಸಾವಿರಾರು ಜನರ ಕಷ್ಟಗಳನ್ನು ಪರಿಹಾರ ಮಾಡಿದ್ದಾರೆ ಇದೇ ಕಾರಣದಿಂದಾಗಿ ಅವರನ್ನು ಕಾಣಲು ಸಾವಿರಾರು ಭಕ್ತರು ದಿನಂಪ್ರತಿ ಬರುತ್ತಿದ್ದಾರೆ. ಪವಾಡ ಪುರುಷ ಎಂದು ಸುದ್ದಿಯಾಗುತ್ತಿದ್ದಂತೆ ನಾನು ಯಾವುದೇ ಪವಾಡವನ್ನು ಮಾಡುತ್ತಿಲ್ಲ ಅದು ಸ್ವಾಮಿ ಹನುಮಂತನ ಕೃಪೆಯಿಂದ ಅವರ ಕಷ್ಟಗಳು ಪರಿಹಾರವಾಗುತ್ತಿದೆ ಎಂದು ಆನೇಕ ಬಾರಿ ಹೇಳಿದ್ದರೆ ಅದರೆ ಇವರ ವಿರುದ್ದ ಕೆಲವು ಬುದ್ದಿ ಜೀವಿಗಳ ತಂಡ ಹಾಗೂ ಮಿಷನರಿಗಳು ಧಿರೇಂದ್ರ ಶಾಸ್ತ್ರಿಯವರು ಪವಾಡ ಹಾಗೂ ಇನ್ನಿತರ ವಿಷಯಗಳ ಮೂಲಕ ಸಮಾಜದಲ್ಲಿ ಮೂಡನಂಬಿಕೆ ಹಾಗೂ ಅಂಧತ್ವವನ್ನು ಬಿತ್ತುತ್ತಿದ್ದಾರೆ ಮಾತ್ರವಲ್ಲದೆ ಇದು ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು ಅದರೆ ಇದರ ಕುರಿತಾಗಿ ಪರ ಹಾಗೂ ವಿರೋಧ ಚರ್ಚೆಗಳು ಶುರುವಾದವು ಸದ್ಯ ಶಾಸ್ತ್ರಿಯವರು ಹೇಳಿರುವ ಮಾತೊಂದು ಬಾರೀ ಸಂಚಲನ ಸೃಷ್ಟಿ ಮಾಡಿದೆ.
ಭಾರತ ಹಿಂ-ದೂ ರಾಷ್ಟ್ರವಾಗಬೇಕಿದೆ ಅದಕ್ಕಾಗಿ ನೀವೂ ನನಗೆ ಬೆಂಬಲ ನೀಡಿ ನಾನು ನಿಮಗೆ ಹಿಂದೂ ರಾಷ್ಟ್ರವನ್ನು ನೀಡುತ್ತೇನೆ ಎಂದು ಹೇಳಿದ್ದಾರೆ ಸದ್ಯ ಶಾಸ್ತ್ರಿಯವರ ಈ ಮಾತು ಭಾರೀ ಚರ್ಚೆಯಾಗುತ್ತಿದೆ.
Comments
Post a Comment