ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಯ ಸಂಧರ್ಭದಲ್ಲಿ ಭಾರೀ ಅಘಾತವೊಂದು ಎದುರಾಗಿದೆ. ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಇನ್ನೂ ಕೆಲವೇ ತಿಂಗಳುಗಳಲ್ಲಿ ನಡೆಯಲಿದೆ ಮಾತ್ರವಲ್ಲದೆ ಮುಂದಿನ ವರ್ಷ ಲೋಕಸಭಾ ಚುನಾವಣೆಯು ನಡೆಯಲಿದೆ ಈ ಎಲ್ಲಾದರ ನಡುವೆ ಕಾಂಗ್ರೆಸ್ ಗೆ ದೊಡ್ಡ ಅಘಾತ ಎದುರಾಗಿದೆ.
ಕಾಂಗ್ರೆಸ್ ನ ಹಿರಿಯ ನಾಯಕರ ಸಾಲಿನಲ್ಲಿ ಗುರುತಿಸಿಕೊಂಡಿದ್ದ ಎ.ಕೆ ಅಂಟನಿ ಪುತ್ರ ಅನಿಲ್ ಅಂಟನಿ ರಾಜಕೀಯದಲ್ಲಿ ನಡೆದ ಕ್ಷೀಪ್ರ ಬೆಳವಣಿಗೆಯಲ್ಲಿ ರಾಜೀನಾಮೆ ನೀಡಿದ್ದಾರೆ. ಮಾತ್ರವಲ್ಲದೆ ಇದು ರಾಜಕೀಯದಲ್ಲಿನ ಭಾರೀ ದೊಡ್ಡ ಬೆಳವಣಿಗೆಗೆ ಕಾರಣವಾಗಿದೆ. ದೇಶದಲ್ಲಿ ಸದ್ಯ ಚರ್ಚೆಯಾಗುತ್ತಿರುವ ಅತೀ ದೊಡ್ಡ ವಿಷಯವೆಂದರೆ ಅದು ಅಂತರಾಷ್ಟ್ರೀಯ ಸುದ್ದಿ ಮಾಧ್ಯಮ ಬಿ.ಬಿ.ಸಿ ಪ್ರಧಾನಿ ಮೋದಿ ಅವರ ವಿರುದ್ದವಾಗಿ ನಡೆಸಿರುವ ಸಾಕ್ಷ್ಯ ಚಿತ್ರದ ಕುರಿತು ಗುಜಾರಾತ್ ಸರ್ಕಾರವನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದರು ಅದಕ್ಕೆ ಕಾಂಗ್ರೆಸ್ ಟ್ವೀಟ್ ಡೀಲಿಟ್ ಮಾಡುವಂತೆ ಒತ್ತಡ ಹೇರಿತ್ತು.
ಅಭಿವ್ಯಾಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ ಆ ಕಾರಣದಿಂದಾಗಿ ಕಾಂಗ್ರೆಸ್ ನ ಎಲ್ಲಾ ಸ್ಥಾನಗಳಿಗೂ ರಾಜೀನಾಮೆ ನೀಡುತ್ತಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ. ಕೇರಳ ಕಾಂಗ್ರೆಸ್ ನಲ್ಲಿ ಸಕ್ರೀಯವಾಗಿ ಕೆಲಸ ಮಾಡುತ್ತಿದ್ದ ಅನಿಲ್ ಅಂಟನಿ ಅವರ ತಂದೆ ಎ.ಕೆ ಅಂಟನಿ ಯುಪಿಎ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿ ಕೆಲಸ ಮಾಡಿದ್ದರು.
Comments
Post a Comment