ಕರ್ನಾಟಕದಲ್ಲಿ ಚುನಾವಣಾ ತಯಾರಿ ಜೋರಾಗಿದೆ. ಪಕ್ಷಗಳು ಆರೋಪ ಪ್ರತ್ಯಾರೋಪಗಳ ಮಧ್ಯೆ ನಿರತರಗಿದ್ದರೆ ಇತ್ತ ಕೆಲವು ನಾಯಕರು ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಪಲಾಯನ ಮಾಡುವ ಬಗ್ಗೆ ಆಲೋಚನೆಗಳನ್ನು ಮಾಡುವ ಯೋಚನೆಯಲಿದ್ದಾರೆ. ರಾಜಕೀಯದಲ್ಲಿ ಅಧಿಕಾರದ ಆಸೆ ಪ್ರತಿಯೊಬ್ಬರಿಗೂ ಇದೆ ಎಂಬುದು ಎಲ್ಲಾರಿಗೂ ತಿಳಿದಿರುವ ಸತ್ಯ. ಇದೇ ಆಸೆಗಾಗಿ ಹಲವಾರು ನಾಯಕರು ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಪಾಲಯನ ಮಾಡಿದರು ಅದರೆ ಇಲ್ಲಿಯೂ ಅದೇ ಸಮಸ್ಯೆ ಎಂದಾಗ ಮತ್ತೊಂದು ಪಕ್ಷಕ್ಕೆ ಅಥವಾ ಮರಳಿ ಗೂಡಿಗೆ ಎಂಬ ಮಾತಿನಂತೆ ಮಾತೃ ಪಕ್ಷಕ್ಕೆ ತಿರುಗುವ ಆಲೋಚನೆ ಮಾಡುತ್ತಾರೆ.
ಕರ್ನಾಟಕ ಬಿಜೆಪಿ ಸರ್ಕಾರ ರಚನೆಯಾಗಿರುವುದೇ ಹಲವಾರು ಶಾಸಕರ ರಾಜೀನಾಮೆಯಿಂದ ಬಹತೇಕ ಸಚಿವರು ತಮಗೆ ಬಯಸದೇ ಭಾಗ್ಯವನ್ನು ಪಡೆದು ಖುಷಿಯಿಂದ ಪಕ್ಷದಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಅದರೆ ಇನ್ನೂ ಕೆಲವರಿಗೆ ಅವರ ಸೋಲು ಮುಳುವಾಯಿತು. ಸದ್ಯ ಚುನಾವಣೆಯ ಸಂಧರ್ಭವಾಗಿರುವುದರಿಂದ ಮತ್ತೇ ಗೆದ್ದೆತ್ತಿನ ಬಾಲ ಹಿಡಿಯಲು ಮುಂದಾಗುವ ಲಕ್ಷಣಗಳು ಕಾಣುತ್ತಿದೆ.
ಬಾಂಬೆ ಶಾಸಕರ ಸಾಲಿನ ನೇತೃತ್ವ ವಹಿಸಿದ್ದ ಎಚ್. ವಿಶ್ವನಾಥ್ ತಮ್ಮ ಸೋಲಿನ ಬಳಿಕ ಮಂಕಾಗಿದ್ದರೆ ಬಳಿಕ ಅವರನ್ನು ವಿಧಾನಪರಿಷತ್ ಆಯ್ಕೆ ಮಾಡಿದರು ಅವರಿಗೆ ಯಾವುದೇ ಸಚಿವ ಸ್ಥಾನ ಲಭ್ಯವಾಗಿಲ್ಲ ಅದರೂ ಸಮಾಧಾನದಿಂದಿದ್ದ ಹಳ್ಳಿ ಹಕ್ಕಿ ಸದ್ಯ ತಮ್ಮ ಗೂಡನ್ನೇ ಬದಲಾಯಿಸುವ ಯೋಚನೆಯಲ್ಲಿರುವ ಮಾತ್ರ ಸತ್ಯ. ತಮ್ಮ ಹಳೆಯ ಗೂಡು ಕಾಂಗ್ರೆಸ್ ಗೆ ಮತ್ತೇ ಮರಳಿ ಸೇರುವ ಆಲೋಚನೆಯಲ್ಲಿರುವ ವಿಶ್ವನಾಥ್ ಕಾಂಗ್ರೆಸ್ ಪಕ್ಷಕ್ಕೆ ಸದ್ಯದಲ್ಲೇ ಸೇರ್ಪಡೆಯಾಗಲಿದ್ದಾರೆ ಎಂಬ ಮಾತುಗಳು ರಾಜ್ಯ ರಾಜಕೀಯದಲ್ಲಿ ಕೇಳಿ ಬರುತ್ತಿದೆ.
ಎಚ್. ವಿಶ್ವನಾಥ್ ಅವರು ತಮ್ಮ ರಾಜಕೀಯ ಜೀವನದ ಬಗ್ಗೆ ಮಾತನಾಡುತ್ತ ನಾನು ಸುಮಾರು ೫೦ ವರ್ಷಗಳ ಕಾಲ ರಾಜಕೀಯದಲ್ಲಿ ಸೇವೆ ಸಲ್ಲಿಸಿದ್ದೇನೆ, ಬಿಜೆಪಿಯಲ್ಲಿ ಏನೋ ಬದಲಾವಣೆಯಾಗುತ್ತಿದೆ ಎಂದು ನಾನು ಬಿಜೆಪಿಗೆ ಬಂದೆ ಅದರೆ ಇವರಂತಹ ಎಡವಟ್ಟು ಗಿರಾಕಿಗಳು ಯಾರು ಇಲ್ಲ ಎಂದು ತಮ್ಮ ಪಕ್ಷದ ವಿರುದ್ದ ಗುಡುಗಿದರು.
Comments
Post a Comment