ಕರ್ನಾಟಕ: ರಾಜ್ಯ ರಾಜಕೀಯದಲ್ಲಿ ದಿನಕ್ಕೊಂದು ಆಟಗಳು ನಡೆಯುತ್ತಿದೆ. ಯಾವ ಪಕ್ಷದ ನಾಯಕರು ಎಲ್ಲಿ ಸ್ಪರ್ಧಿಸುತ್ತಾರೆ ಎಂದು ಹೇಳುವುದು ತುಸು ಕಷ್ಟವೇ ಅದರೂ ರಾಜಕೀಯದ ಆಟದಲ್ಲಿ ಯಾವುದನ್ನೂ ಕೂಡ ಸುಲಭವಾಗಿ ತೆಗೆದುಕೊಳ್ಳಲಾಗುವುದಿಲ್ಲ ಬದಲಾಗಿ ಒಂದು ಸಣ್ಣ ತಪ್ಪು ಕೂಡ ದೊಡ್ಡ ಫಲಿತಾಂಶಕ್ಕೆ ಹಿನ್ನಡೆಯಾಗಬಹುದು ಎಂಬುದು ಈಗಾಗಲೇ ಹಲವಾರು ಬಾರಿ ಸಾಭೀತಾಗಿದೆ. ಸದ್ಯ ಅಂತಹದ್ದೇ ಒಂದು ಬೆಳವಣಿಗೆ ಕರ್ನಾಟಕದ ರಾಜ್ಯದಲ್ಲಿ ನಡೆಯುವ ಎಲ್ಲಾ ಲಕ್ಷಣಗಳೂ ಕಾಣಸಿಗುತ್ತಿದೆ.
ಶ್ರೀ ರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಾರ್ಕಳದಿಂದ ಪಕ್ಷೇತರ ಆಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಭಾರೀ ಜೋರಾಗಿ ಕೇಳಿ ಬರುತ್ತಿದೆ. ಮುತಾಲಿಕ್ ಸ್ಪರ್ಧಿಸುತ್ತಿರುವುದು ಬೇರೆ ಯಾರ ವಿರುದ್ದವೂ ಅಲ್ಲ ಕರ್ನಾಟಕ ಸರ್ಕಾರದ ಹಾಲಿ ಇಂಧನ ಸಚಿವ, ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ವಿ ಸುನೀಲ್ ಕುಮಾರ್ ಅವರ ಸ್ಪರ್ಧಿಯಾಗಿ ಅದರೆ ಸದ್ಯ ಇದು ರಾಜಕೀಯ ಜಟಾಪಟಿಯಾಗಿ ಸುದ್ದಿಯಾಗುತ್ತಿದೆ.
ಸುನೀಲ್ ಕುಮಾರ್ ಒರ್ವ ಪ್ರಬಲ ಹಿಂದುತ್ವವಾದಿ ಅದರೆ ಅತ್ತ ಪ್ರಮೋದ್ ಮುತಾಲಿಕ್ ಕೂಡ ಪ್ರಬಲ್ ಹಿಂ-ದೂ ಮುಖಂಡ. ಈ ಇಬ್ಬರೂ ನಾಯಕರಿಂದಾಗಿ ವಿರೋಧಿಗಳಿಗೆ ಲಾಭವಾಗಲಿದೆಯಾ ಎಂಬ ಪಕ್ಷಕ್ಕೆ ಕಾಲವೇ ಉತ್ತರಿಸಲಿದೆ. ಈಗಾಗಲೇ ಪ್ರಮೋದ್ ಮುತಾಲಿಕ್ ತಾನು ಕಾರ್ಕಳದಿಂದ ಪಕ್ಷೇತರರಾಗಿ ಸ್ಪರ್ಧಿಸುವುದು ಬಹುತೇಕ ಖಚಿತ ನನ್ನ ವಿರುದ್ದ ಬಿಜೆಪಿ ಯಾವುದೇ ಆಭ್ಯರ್ಥಿಗಳನ್ನು ಹಾಕಬಾರದು ಎಂದು ಮನವಿ ಮಾಡಿಕೊಂಡಿದ್ದಾರು ಇದಕ್ಕೆ ಮುಖ್ಯಮಂತ್ರಿಗಳು ಅದು ಸಾಧ್ಯವಿಲ್ಲ ಎಂದು ಮಾಧ್ಯಮಗಳಲ್ಲಿ ಉತ್ತರಿಸಿದ್ದಾರೆ. ಇತ್ತ ಸುನೀಲ್ ಕುಮಾರ್ ಕೂಡ ಪತ್ರಿಕಾಗೋಷ್ಠಿಯಲ್ಲಿ ಈ ರೀತಿಯ ಬೆಳವಣಿಗೆಯಿಂದಾಗಿ ಹಿಂದೂ ಪರ ಪಕ್ಷಗಳಿಗೆ ಹಿನ್ನಡೆಯಾಗಲಿದೆ, ಮುತಾಲಿ ಈ ಹಿಂದೆಯೂ ಹಲವಾರು ಪ್ರಭಾವಿ ನಾಯಕರ ವಿರುದ್ದ ಸ್ಪರ್ಧಿಸಿದ್ದಾರೆಆದರ ಫಲಿತಾಂಶ ಏನೂ ಎನ್ನುವುದು ಎಲ್ಲಾರಿಗೂ ತಿಳಿದಿದೆ. ಚುನಾವಣೆ ಬಳಿಕೆ ಎಲ್ಲಾವೂ ಅರ್ಥವಾಗಲಿದೆ ಎಂದು ಹೇಳಿದರು.
Comments
Post a Comment