'ರಾಜಾಹುಲಿ' ಯಡಿಯೂರಪ್ಪರ ಮುಡಿಗೆ ಮತ್ತೊಂದು ಮಹತ್ವದ ಗರಿ.? ಸಂತಸದಲ್ಲಿ ಮಾಜಿ ಸಿಎಂ.!

ಕರ್ನಾಟಕ ರಾಜ್ಯ ಕಂಡ ಜನಪ್ರಿಯ ನಾಯಕ ಹಾಗೂ ರೈತ ನಾಯಕ ಬಿ.ಎಸ್ ಯಡಿಯೂರಪ್ಪರ ಮುಡಿಗೆ ಮತ್ತೊಂದು ಮಹತ್ವದ ಗರಿ ದೊರಕಿದೆ. ರಾಜಕೀಯದಲ್ಲಿ ಎಲ್ಲಾ ಹುದ್ದೆಗಳನ್ನು ನಿರ್ವಹಿಸಿ, ಸಕ್ರೀಯ ರಾಜಕಾರಣದಿಂದ ದೂರ ಉಳಿದಿರುವ ಬಿ.ಎಸ್ ಯಡಿಯೂರಪ್ಪಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಲು ಸಿದ್ದವಾಗಿದೆ.

ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಸ್ಥಾಪನೆಗೆ ಕಾರಣರಾದ ಮಾಜಿ ಸಿಎಂ ಯಡಿಯೂರಪ್ಪನವರಿಗೆ ವಿಶೇಷ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರಧಾನ ಮಾಡುವ ಮೂಲಕ ಕೃತಜ್ಣತೆ ಸಲ್ಲಿಸುತ್ತಿದೆ. 

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಶುಕ್ರವಾರ ನಡೆಯಲಿರುವ ವಿಶ್ವವಿದ್ಯಾನಿಲಯದ ೮ನೇ ಘಟಿಕೋತ್ಸವದ ಸಂಭ್ರಮದ ಸಂಧರ್ಭದಲ್ಲಿ ಕುಲಾಧಿಪತಿಯೂ ಅದ ಕರ್ನಾಟಕದ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಬಿ.ಎಸ್ ಯಡಿಯೂರಪ್ಪ ಎಂದು ನಾಮಂಕಿತದಿಂದ ಗುರುತಿಸಲ್ಪಡುತ್ತಿದ್ದ ರಾಜಾಹುಲಿ ಇನ್ನು ಮುಂದೆ 'ಡಾ. ಬಿ.ಎಸ್ ಯಡಿಯೂರಪ್ಪ' ಎಂದು ಗುರುತಿಸಲ್ಪಡುತ್ತಾರೆ. ಯಡಿಯೂರಪ್ಪರಿಗೆ ಗೌರವ ಡಾಕ್ಟರೇಟ್ ನೀಡುತ್ತಿರುವುದು ಅವರ ಅಭಿಮಾನಿಗಳಲ್ಲಿ ಬಹಳ ಸಂತೋಷವನ್ನು ಉಂಟು ಮಾಡಿದೆ.

Comments