ವಿರೋಧಿಗಳಿಗೆ ಮತ್ತೊಂದು ಖ'ಡಕ್ ಸಂದೇಶ ರವಾನಿಸಿದ ಸಂಘಟನ ಕಾರ್ಯದರ್ಶಿ ಬಿ.ಎಲ್ ಸಂತೋಷ್


ಕರ್ನಾಟಕದ ಸುಮಾರು 40-45 ಶಾಸಕರು ನನ್ನ ಜತೆಗೇ ಸಂಪರ್ಕದಲ್ಲಿದ್ದಾರೆ ದೆಹಲಿಯ ನಾಯಕರು ಒಪ್ಪಿಗೆ ಕೊಟ್ಟರೆ ನನಗೆ ಒಂದು ದಿನ ಕೆಲಸ: ಹೀಗೆಂದು ಹೇಳಿದ್ದಾರೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಬಿಜೆಪಿಯ ಸಂಘಟನಾ ಸಭೆಯಲ್ಲಿ  ಸಮಾರೋಪ ಭಾಷಣ ಮಾಡಿದ ಅವರು ಬಿಜೆಪಿಯಿಂದ ಕೆಲವರು ಕಾಂಗ್ರೆಸ್‌ನ ಆಪರೇಷನ್‌ಗೆ ಒಳಗಾಗುವ ಸಾಧ್ಯತೆಗಳ ಬಗ್ಗೆಯೂ ಮಾತನಾಡಿದರು.

ನಮ್ಮಲ್ಲಿಂದ ಯಾರೂ ಕಾಂಗ್ರೆಸ್ ಗೆ ಹೋಗಲ್ಲ ಎಂದು ಹೇಳುವ ಮೂಲಕ ಪಕ್ಷದಲ್ಲಿ ಧೈರ್ಯ ತುಂಬುವ ಯತ್ನ ಮಾಡಿದ ಸಂತೋಷ್‌ ಅವರು, ನಮ್ಮ ಜತೆಗೆ ಬಂದವರನ್ನು ನಾವೇ ಬಾಂಬೇ ಬಾಯ್ಸ್‌ ಅಂತ ಹೇಳುವುದು ಬೇಡ. ಕಷ್ಟ ಕಾಲದಲ್ಲಿ ನಮ್ಮ ಜೊತೆಗೆ ಬಂದಿದ್ದಾರೆ. ಅವರು ಹೋಗುತ್ತಾರೆ ಅಂತ ನಾವೇ ಹೇಳುವುದು ಸರಿಯಲ್ಲ. ಹಾಗಂತ ಹೋಗುವವರ ಬಗ್ಗೆ ಚಿಂತೆ ಬೇಡ ಎಂದು ಹೇಳಿದರು ಸಂತೋಷ್‌.

Comments