ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಮುಡಿಗೆ ಮತ್ತೊಂದು ಗರಿ, ದೇಶದ ಟಾಪ್ ಮುಖ್ಯಮಂತ್ರಿ ಇವರು.!

ಉತ್ತರಪ್ರದೇಶ ಈಗ ಭಾಗಶಃ ಬದಲಾಗುತ್ತಿದೆ. ನಿರುದ್ಯೋಗ ಹಾಗೂ ಇನ್ನಿತರ ಮೂಲಭೂತ ಸಮಸ್ಯೆಗಳನ್ನು ಎದುರಿಸುತಿದ್ದ ರಾಜ್ಯದಲ್ಲಿ ಈಗ ಆಭಿವೃದ್ದಿಯ ಪರ್ವ ಆರಂಭವಾಗಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆರಿದ ಬಳಿಕ ಅಲ್ಲಿನ ವಸ್ತು ಸ್ಥಿತಿಯೇ ಬದಲಾಗಿದೆ ಮಾತ್ರವಲ್ಲದೆ ಉತ್ತರ ಪ್ರದೇಶ ಕೂಡ ಪ್ರಭಾವಿ ರಾಜ್ಯಗಳಲ್ಲಿ ಒಂದು ಎಂಬುದನ್ನು ಸಾಭೀತುಪಡಿಸುತ್ತಿದೆ. 

ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಯೋಗಿ ಅದಿತ್ಯನಾಥ್ ಮುಡಿಗೆ ಈಗ ಮತ್ತೊಂದು ಗೌರವ ಸೇರಿಕೊಂಡಿದೆ. ದೇಶದ ಜನಪ್ರಿಯ ಮುಖ್ಯಮಂತ್ರಿಗಳ ಸಾಲಿನಲ್ಲಿ ಯೋಗಿ ಅದಿತ್ಯನಾಥ್ ಎರಡನೇ ಸ್ಥಾನದಲ್ಲಿದ್ದಾರೆ ಮಾತ್ರವಲ್ಲದೆ ಇದು ಭಾರತದ ೨೯ ಮುಖ್ಯಮಂತ್ರಿಗಳ ಪೈಕಿ ಟಾಪ್ ೨ ರ ಸಾಲಿನಲ್ಲಿ ಯೋಗಿ ಅದಿತ್ಯನಾಥ್ ನಿಂತಿದ್ದಾರೆ.

ಒಡಿಸ್ಸಾದ ಜನಪ್ರಿಯ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸುಮಾರು ೫೨% ರಷ್ಟು ರೇಟಿಂಗ್ ಪಡೆದು ಮೊದಲನೇ ಸ್ಥಾನದಲ್ಲಿದ್ದಾರೆ. ಸುಮಾರು ೫೧% ದಷ್ಟು ರೇಟಿಂಗ್ ಪಡೆದು ಯೋಗಿ ಎರಡನೇ ಸ್ಥಾನದಲ್ಲಿದ್ದಾರೆ. 

Comments